ಮುಂಬೈ : ಟಿ20 ವಿಶ್ವಕಪ್ 2026 ಟೂರ್ನಿಯು ಭಾರಿ ರೋಚಕತೆಯೊಂದಿಗೆ ಮುಂದುವರೆಯುತ್ತಿದೆ. ಸೂಪರ್-8 ಸುತ್ತಿನ ಪಂದ್ಯಗಳು ಮುಗಿಯುವ ಹೊತ್ತಿಗೆ ಕೇವಲ 5 ತಂಡಗಳು ಉಳಿದಿದ್ದು, ಇದರಲ್ಲಿ ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆದಿವೆ.
ಭಾರತ-ವೆಸ್ಟ್ ಇಂಡೀಸ್ ನಡುವಿನ ಹಣಾಹಣಿ ಸೆಮಿಫೈನಲ್ ತಲುಪುವ ನಾಲ್ಕನೇ ತಂಡವನ್ನು ನಿರ್ಧರಿಸಲಿದೆ. ಈ ಪರಿಸ್ಥಿತಿಯಲ್ಲಿ ಭಾರತದ ಮೇಲೆ ಹೆಚ್ಚಿನ ಒತ್ತಡವಿರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. 2026 ರ ಟಿ20 ವಿಶ್ವಕಪ್ನ ಸೆಮಿಫೈನಲ್ ಚಿತ್ರ ಇಂದು ಬಹಿರಂಗಗೊಳ್ಳಲಿದೆ.
ಈ ಸೂಪರ್ ಘರ್ಷಣೆ ಭಾರತದ ಅದೃಷ್ಟದ ತವರು ಕೋಲ್ಕತ್ತಾದಲ್ಲಿ ನಡೆಯಲಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ಗಳಲ್ಲಿ ಯಾವುದು ಸವಾಲನ್ನು ಜಯಿಸಿ ಸೆಮಿಫೈನಲ್ ತಲುಪುತ್ತದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ
ಪಾಕಿಸ್ತಾನ್ ತಂಡ ಸೂಪರ್-8ನಿಂದ ಹೊರಬಿದ್ದ ನಂತರ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಸಂಪೂರ್ಣವಾಗಿ ಭಾರತದಲ್ಲೇ ನಡೆಯಲಿವೆ ಎಂದು ICC ಅಧಿಕೃತವಾಗಿ ಘೋಷಿಸಿದೆ. (ಪಾಕಿಸ್ತಾನ್ ಅರ್ಹತೆ ಪಡೆದಿದ್ದರೆ ಮೊದಲ ಸೆಮಿಫೈನಲ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು.)
ಸೆಮಿಫೈನಲ್ ಪಂದ್ಯಗಳ ವಿವರ:
- ಮೊದಲ ಸೆಮಿಫೈನಲ್ (ಮಾರ್ಚ್ 4, 2026): ಸೌತ್ ಆಫ್ರಿಕಾ vs ನ್ಯೂಝಿಲೆಂಡ್ ಸ್ಥಳ: ಈಡನ್ ಗಾರ್ಡನ್ಸ್, ಕೊಲ್ಕತ್ತಾ ಸಮಯ: ರಾತ್ರಿ 7:00 ಗಂಟೆ (IST)
- ದ್ವಿತೀಯ ಸೆಮಿಫೈನಲ್ (ಮಾರ್ಚ್ 5, 2026): ಇಂಗ್ಲೆಂಡ್ vs (ಭಾರತ ಅಥವಾ ವೆಸ್ಟ್ ಇಂಡೀಸ್) ಸ್ಥಳ: ವಾಂಖೆಡೆ ಸ್ಟೇಡಿಯಂ, ಮುಂಬೈ ಸಮಯ: ರಾತ್ರಿ 7:00 ಗಂಟೆ (IST)
ಫೈನಲ್ ಪಂದ್ಯ:
- ದಿನಾಂಕ: ಮಾರ್ಚ್ 8, 2026 ಸ್ಥಳ: ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ ಸಮಯ: ರಾತ್ರಿ 7:00 ಗಂಟೆ (IST)

