ಕಾಞಂಗಾಡ್ : ಕಬಡ್ಡಿ ಪಂದ್ಯಾಟಕ್ಕಾಗಿ ತಳಿರು ತೋರಣ ಕಟ್ಟುತ್ತಿದ್ದ ವೇಳೆ ಕುಸಿದು ಬಿದ್ದು ಯುವ ಕಬಡ್ಡಿ ಆಟಗಾರ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕ ಕಾಞಂಗಾಡ್ ಪಡನ್ನಕಾಡ್ ಅನಂತಂಪಳ್ಳ ನಿವಾಸಿ, ಸತೀಶ್ – ಪುಷ್ಪ ದಂಪತಿಯ ಪುತ್ರ ರಾಜ್ಯ ಕಬಡ್ಡಿ ತಂಡದಲ್ಲಿ ಆಟಗಾರನಾದ ನಿತಿನ್ಕೃಷ್ಣ(16) ಎಂದು ಗುರುತಿಸಲಾಗಿದೆ.
ಸ್ಥಳೀಯ ಶಬರಿ ಕ್ಲಬ್ ಆಶ್ರಯದಲ್ಲಿ ಇಂದು (ಸೋಮವಾರ) ಕಬಡ್ಡಿ ಪಂದ್ಯಾಟ ನಡೆಯಬೇಕಿತ್ತು. ಇದಕ್ಕಾಗಿ ತೋರಣ ಕಟ್ಟುತ್ತಿದ್ದ ವೇಳೆ ನಿತಿನ್ ಕೃಷ್ಣ ಕುಸಿದು ಬಿದ್ದರೆನ್ನಲಾಗಿದೆ. ಜತೆಯಲ್ಲಿದ್ದವರು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ.
ಕೋಜಿಕ್ಕೋಡು ಮುಕ್ಕಂ ವೊಕೇಶನಲ್ ಹೈಯರ್ ಸೆಕಂಡರಿ ಶಾಲೆಯಲ್ಲಿ ಪ್ಲಸ್ ಟು ವಿದ್ಯಾರ್ಥಿಯಾದ ಈತ ಎರಡು ದಿನಗಳ ರಜೆಯಿಂದಾಗಿ ಊರಿಗೆ ಬಂದು ಕಬಡ್ಡಿ ಪಂದ್ಯಾಟದ ತಯಾರಿಯಲ್ಲಿದ್ದನು ಎನ್ನಲಾಗಿದೆ.

