ಮಂಗಳೂರು : ಅಬುದಾಬಿಯಲ್ಲಿ ಫೆಬ್ರವರಿ 4ರಿಂದ 15ರವರೆಗೆ ನಡೆದ ಅಂತರಾಷ್ಟ್ರೀಯ ಮಾಸ್ಟರ್ಸ್ ಗೇಮ್ಸ್ 2026ರಲ್ಲಿ ಮಂಗಳೂರು ಮೂಲದ ವಕೀಲ ಡಿ. ಪದ್ಮನಾಭ ಕುಮಾರ್ ಗಮನಾರ್ಹ ಸಾಧನೆ ಮಾಡಿ ಚಾಂಪಿಯನ್ನಾಗಿ ಹೊರಹೊಮ್ಮಿದ್ದು ಈ ಮೂಲಕ 8 ಬಾರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಆಗಿರುವುದಾಗಿ ಪದ್ಮನಾಭ ಕುಮಾರ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ,ಈ ಕ್ರೀಡಾಕೂಟದಲ್ಲಿ 25,000 ಕ್ರೀಡಾಪಟುಗಳು 125 ರಾಷ್ಟ್ರಗಳಿಂದ ಭಾಗವಹಿಸಿದ್ದರು. 27ಕ್ಕೂ ಹೆಚ್ಚು ಕ್ರೀಡೆಗಳು 38 ಸ್ಥಳಗಳಲ್ಲಿ ಆಯೋಜಿಸಲ್ಪಟ್ಟಿತ್ತು ಎಂದರು .
ನಾನು 100, 200, 400 ಮೀಟರ್ ಓಟ, 4×100 ಮತ್ತು 4×400 ಮೀಟರ್ ರಿಲೇ ಹಾಗೂ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ, 1 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನು ಪಡೆದಿದ್ದೇನೆ . ಜೊತೆಗೆ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಮೂರನೇ ಬಾರಿ ಚಾಂಪಿಯನ್ಶಿಪ್ ಪಡೆದ್ದಿದೇನೆ .ಇದರ ಜೊತೆಗೆ ತಮ್ಮ ಹಿಂದಿನ ಕ್ರೀಡಾ ಸಾಧನೆಯನ್ನು ಹಂಚಿಕೊಂಡರು .ಮುಂದೆ 2027 ರಲ್ಲಿ ಜಪಾನಿನ ಕಾನ್ಸಾಯಿ ನಡೆಯಲಿರುವ ಅಂತರಾಷ್ಟ್ರೀಯ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕಾರ್ಪೊರೇಟರ್ ಕೆ.ಭಾಸ್ಕರ್ ರಾವ್, ಆನಂದ್, ಮೀನಾ ಟೆಲ್ಲಿಸ್, ಸಚ್ಚಿದಾನಂದ ಕಾಮತ್ ಮುಂತಾದವರು ಉಪಸ್ಥಿತರಿದ್ದರು .

