ಮಂಗಳೂರು : ನಿಟ್ಟೆ ಉಷಾ ನರ್ಸಿಂಗ್ ಸೈನ್ಸಸ್ ಸಂಸ್ಥೆಯು ತನ್ನ 33ನೇ ವಾರ್ಷಿಕೋತ್ಸವವನ್ನು ಮಾರ್ಚ್ 6 ಕ್ಕೆ ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ಅಡಿಟೋರಿಯಂನಲ್ಲಿ “ಸಮನ್ವಯ 2026” ಎಂಬ ಶೀರ್ಷಿಕೆಯಲ್ಲಿ ಆಚರಿಸುತ್ತಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಫಾತಿಮಾ ಡಿಸಿಲ್ವಾ
ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನವದೆಹಲಿ ಟೈನ್ ನರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಕಾರ್ಯದರ್ಶಿಯಾದ ಎವ್ಲಿನ್ ಪಿ.ಕಣ್ಣನ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಡೀಮ್ಸ್ ಟು ಬಿ ಯುನಿವರ್ಸಿಟಿಯ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷರಾದ ಪ್ರೊ. ಡಾ.ಗೋಪಾಲ್ ಮೊಗರಾಯ ವಹಿಸಲಿದ್ದಾರೆ ಈ ಸಂದರ್ಭದಲ್ಲಿ ಗಣ್ಯರು ಉಪಸ್ಥಿತರಿರಲಿದ್ದಾರೆ .ವಾರ್ಷಿಕೋತ್ಸವದ ಸಿದ್ಧತೆಯಾಗಿ ಒಂದು ವಾರಪೂರ್ತಿ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಸಬಿತಾ ನಾಯಕ್ ,ಜೆಸಿಂತಾ ವೇಗಸ್ ,ಶ್ರೀಮತಿ ಪ್ರತಿಮಾ, ಮಾಳವಿಕಾ ಮುಂತಾದವರು ಉಪಸ್ಥಿತರಿದ್ದರು .

