ಮಂಗಳೂರು : ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ಬೋಳಾರ, ಮಂಗಳೂರು ಇದರ ವರ್ಷಾವಧಿ ಜಾತ್ರಾ ಮಹೋತ್ಸವವು ದಿನಾಂಕ 8 ರಿಂದ 13 ನೇ ಶುಕ್ರವಾರದ ವರೆಗೆ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಬಹಳ ವಿಜ್ರಂಭಣೆಯಿಂದ ಜರಗಲಿರುವುದು.
ದಿನಾಂಕ 9ರಂದು ಸೋಮವಾರ 108 ತೆಂಗಿನಕಾಯಿ ಗಣಹೋಮ ಜರಗಲಿರುವುದು, ದಿನಾಂಕ 12ರಂದು ಗುರುವಾರ ಮಧ್ಯಾಹ್ನ ಗಂಟೆ 12.00ಕ್ಕೆ ಪೂಜೆಯಾಗಿ ರಥಾರೋಹಣ ನಂತರ ಸಾಯಂಕಾಲ ಗಂಟೆ 7.00 ಕ್ಕೆ ರಥೋತ್ಸವ, ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ ಶಯನ ನಡೆಯಲಿದೆ.
ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿರುವುದು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀ ರಾಜೇಂದ್ರ ಕುಮಾರ್, ಜನರಲ್ ಮ್ಯಾನೇಜರ್ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಇವರು ಉದ್ಘಾಟಿಸಲಿದ್ದಾರೆ.
ಜಾತ್ರೋತ್ಸವ ಸಮಯದಲ್ಲಿ ಪ್ರತಿ ದಿನ ಮಧ್ಯಾಹ್ನದ ಮಹಾಪೂಜೆಯ ನಂತರ ಅನ್ನಸಂತರ್ಪಣೆಯು ಜರಗಲಿರುವುದು ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರರಾದ ಎಂ.ಅರುಣ್ ಐತಾಳ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

