ದುಬೈ: ದುಬೈನ ಮರೀನಾದಲ್ಲಿರುವ ಮರೀನಾ ಟವರ್ ಗಗನಚುಂಬಿ ಕಟ್ಟಡದ ಮೇಲೆ ಇರಾನ್ ಶನಿವಾರ ಡ್ರೋನ್ ದಾಳಿ ನಡೆಸಿದ್ದು 23 ನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಆಕಾಶಕ್ಕೆ ದಟ್ಟ ಹೊಗೆ ಆವರಿಸಿದೆ, ಡ್ರೋನ್ ದಾಳಿಯ ಅವಶೇಷಗಳು ಟ್ಯಾಕ್ಸಿ ಚಾಲಕನ ಮೇಲೆ ಬಿದ್ದು ಆತ ಸಾವನ್ನಪ್ಪಿದ್ದು ಆತ ಪಾಕಿಸ್ತಾನಿ ಪ್ರಜೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊಗಳು ಶ್ರೀಮಂತ ವಲಸಿಗರು ಮತ್ತು ಅಂತರರಾಷ್ಟ್ರೀಯ ಹೂಡಿಕೆದಾರರು ನೆಲೆಸಿರುವ ಈ 90 ಅಂತಸ್ತಿನ ವಸತಿ ಗೋಪುರದಿಂದ ಹೊಗೆ ಏರುತ್ತಿರುವುದನ್ನು ತೋರಿಸಿವೆ. ಹಾನಿಯ ವ್ಯಾಪ್ತಿಯ ಕುರಿತು ಅಧಿಕಾರಿಗಳು ಇನ್ನೂ ಸಂಪೂರ್ಣ ವಿವರಗಳನ್ನು ಬಿಡುಗಡೆ ಮಾಡಿಲ್ಲ.

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ನೆರೆಯ ರಾಷ್ಟ್ರಗಳಿಗೆ ಕ್ಷಮೆಯಾಚಿಸಿದ ನಂತರವೂ ಈ ದಾಳಿ ನಡೆದಿದೆ, ಟೆಹ್ರಾನ್ ಮೇಲೆ ದಾಳಿ ಮಾಡಲು ಬಳಸದ ಹೊರತು ನಾವು ನೆರೆಯ ದೇಶಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಹೇಳಿದರು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಷಮೆಯಾಚನೆಯನ್ನು ಶರಣಾಗತಿ ಎಂದು ಬಣ್ಣಿಸಿದರು, ಇರಾನ್ ಪಡೆಗಳು ದಾಳಿಗಳನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿತು.

