ಕೇರಳ : ದೇಶದ ರಾಜಕೀಯ ವಲಯದಲ್ಲಿ ಇದೀಗ ಭಾರಿ ಸಂಚಲನ ಮೂಡುತ್ತಿದೆ ! ಇದಕ್ಕೆ ಕಾರಣವೆಂದರೆ ಕೇರಳ ಸೇರಿದಂತೆ ಇತರೇ ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಗೆ ಇನ್ನೆನ್ನೂ ಮುಹೂರ್ತ ಫಿಕ್ಸ್ ಆಗಲಿದೆ .
ಕೇಂದ್ರ ಚುನಾವಣಾ ಆಯೋಗದಿಂದ ಬಿಗ್ ಅಪ್ಡೇಟ್ ಪ್ರಕಾರ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚ್ಚೇರಿ ರಾಜ್ಯಗಳ ಚುನಾವಣಾ ವೇಳಾಪಟ್ಟಿ ಮಾರ್ಚ್ 15ರ ನಂತರ ಯಾವುದೇ ಕ್ಷಣದಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ.
ಪಶ್ಚಿಮ ಬಂಗಾಳದ ಅಂತಿಮ ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾರ್ಚ್ 15 ಕೊನೆಯ ದಿನವಾಗಿದೆ.ಈ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ಅಂದರೆ ಮಾರ್ಚ್ 16 ಅಥವಾ 17ರಂದು ಕೇಂದ್ರ ಚುನಾವಣಾ ಆಯೋಗವು ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಲಿದೆ.
ಕೇರಳ, ತಮಿಳುನಾಡು & ಪುದುಚ್ಚೇರಿ: ಈ ಮೂರು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ಮುಗಿಸಲು ಸಿದ್ಧತೆ. ಅಸ್ಸಾಂ & ಪಶ್ಚಿಮ ಬಂಗಾಳ ಇಲ್ಲಿನ ರಾಜಕೀಯ ಪರಿಸ್ಥಿತಿ ಮತ್ತು ಭದ್ರತಾ ದೃಷ್ಟಿಯಿಂದ ಮೂರು ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಒಟ್ಟಿನಲ್ಲಿ, ಮಾ. 15ರ ನಂತರ ಇಡೀ ದೇಶದ ಚಿತ್ತ ದಿಲ್ಲಿಯ ಚುನಾವಣಾ ಆಯೋಗದ ಕಚೇರಿಯತ್ತ ನೋಡಲಿದೆ .

