ಗಾಂಜಾ ಮಾರಾಟ ಪ್ರಕರಣದಲ್ಲಿ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉತ್ತರ ಪ್ರದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸುಳ್ಯ ಪೊಲೀಸ್ ಠಾಣಾ ಅ.ಕ್ರ 328/2016, ಕಲಂ :8(c) ಜೊತೆಗೆ 20(b) NDPS Act ಪ್ರಕರಣ ಹಾಗೂ LPC NO : 11/2024 ರಲ್ಲಿ ಸುಮಾರು 10 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಉತ್ತರ ಪ್ರದೇಶದ ನಸೀಮ್ ಎಂಬಾತನನ್ನು ಸುಳ್ಯ ಠಾಣಾ ಸಿಬ್ಬಂದಿಗಳಾದ ರಮೇಶ್ ಎಲ್, ರಾಜು ನಾಯ್ಕ.ಡಿ, ಹಾಗೂ ವಿಖ್ಯಾತ ಜೆ ಗೌಡ ಅವರುಗಳ ತಂಡವು ಉತ್ತರ ಪ್ರದೇಶ ರಾಜ್ಯದ ಖಾಜಿಪುರ ಎಂಬಲ್ಲಿ ದಿನಾಂಕ ದಸ್ತಗಿರಿ ಮಾಡಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

