ಮಂಗಳೂರು : ಬೋಯ್ರೈನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಎ.4ರಿಂದ 12ರವರೆಗೆ ಮಂಗಳೂರು ಉತ್ಸವ ಎಂಬ ಮನರಂಜನಾ ಕಾರ್ಯಕ್ರಮ ಕರಾವಳಿ ಉತ್ಸವ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಬೋಯ್ರೈನ್ ಡ್ಯಾನ್ಸ್ ಅಕಾಡೆಮಿಯ ಮಂಜು ಸುವರ್ಣ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ನೃತ್ಯ ಉತ್ಸವದ ಜತೆಗೆ ರಾಜ್ಯ ಮಟ್ಟದ ಸಮೂಹ ನೃತ್ಯ ಸ್ಪರ್ಧೆ ಹಾಗೂ ಗಾಯನ ಸ್ಪರ್ಧೆ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಫುಡ್ ಫೆಸ್ಟಿವಲ್, ಸೆಲೆಬ್ರಿಟಿಗಳಿಂದ ಪ್ರದರ್ಶನ, ಐಸ್ಕ್ರೀಂ ಫೆಸ್ಟಿವಲ್, ಆಟೋ ಕಾರ್ನಿವಲ್, ಅಮ್ಯೂಸ್ಮೆಂಟ್ ಪಾರ್ಕ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದವರು ಹೇಳಿದರು.

ಕಳೆದ 25 ವರ್ಷಗಳಿಂದ ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಪಡೆದಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮಾಲಕ ಜಗದೀಶ್ ಕದ್ರಿ, ಕದ್ರಿ ಇವೆಂಟ್ಸ್ ನ ಕಿಶೋರ್ ಕುಮಾರ್, ಮಂಜು ಸುವರ್ಣ, ಚಾರ್ವಿ ಉಪಸ್ಥಿತರಿದ್ದರು.

