ಹುಣಸೂರು : ಮೈಸೂರು ನಗರ ಆಯ್ತು ಈಗ ಹಳ್ಳಿಯಲ್ಲೂ ಡ್ರಗ್ಸ್. ಹುಣಸೂರು ತಾಲೂಕಿನ ರತ್ನಪುರಿ-ದಾಸನಪುರ ಮದ್ಯೆ ಇರುವ ತೋಟದ ಮನೆಯಲ್ಲಿ ಬಾರೀ ಪ್ರಮಾಣದ ಸಿಂತೆಟಿಕ್ಸ್ ಡ್ರಗ್ಸ್ ಪ್ಯಾಕೆಟ್ ಮಾಡುತ್ತಿದ್ದ ವೇಳೆಯೇ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಹುಣಸೂರು ನಗರದ ರಹಮತ್ ಮೊಹಲ್ಲಾದ ಇರ್ಫಾನ್ ಎಂಬುವವರಿಗೆ ಸೇರಿದ ತೋಟದಲ್ಲಿ ಕೃತ್ಯ ನಡೆದಿದ್ದು, ಸುಮಾರು 30 ಕೆ.ಜಿ.ಗೂ ಹೆಚ್ಚು ಸಿಂತೆಟಿಕ್ಸ್ ಡ್ರಗ್ಸ್ ವಶಪಡೆದಿದ್ದಾರೆ.

ತೋಟದ ಮಾಲಿಕ ಹುಣಸೂರಿನ ಇರ್ಫಾನ್ ಮೈಸೂರಿನ ಇರ್ಫಾನ್ ಎಂಬಾತ ಸೇರಿಕೊಂಡು ಈ ಕೃತ್ಯ ನಡೆಸಿದ್ದಾರೆಂದು ತಿಳಿದು ಬಂದಿದ್ದು, ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಸಂಜೆ ದಿಡೀರ್ ಪೊಲೀಸರು ದಾಳಿ ನಡೆಸಿದ ವೇಳೆ ಸ್ಥಳದಿಂದ ಪರಾರಿಯಾಗಲೆತ್ನಿಸಿದವರನ್ನು ಸುಮಾರು 10 ಕಿ.ಮೀ.ವರೆಗೆ ಚೇಸ್ ಮಾಡಿ ನಗರಕ್ಕೆ ಸಮೀಪದ ಸಲೀಂ ಪ್ಯಾಲೆಸ್ ಬಳಿ ಬಂಧಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಎಸ್.ಪಿ. ಮಲ್ಲಿಕಾರ್ಜುನ ಬಾಲದಂಡಿ ಡಿವೈಎಸ್ಪಿ ರವಿ ಭೇಟಿ ಇತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೋಟದ ಮಾಲಿಕ ಇರ್ಫಾನ್ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಇನ್ನಷ್ಟೆ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

