ಚಿನೈ : ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಏಪ್ರಿಲ್ 23 ರ ವಿಧಾನಸಭಾ ಚುನಾವಣೆ ಪ್ರಯುಕ್ತ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಿದರು, ತಮ್ಮ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆರಲು ಹೊಸ ರಣತಂತ್ರವನ್ನು ರೂಪಿಸಿದ್ದಾರೆ,
ಈ ಬಾರಿ ಮಹಿಳೆಯರಿಗಾಗಿ ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಲು ಅಥವಾ ಬದಲಾಯಿಸಲು ಒಂದು ಬಾರಿ ರೂ. 8,000 “ಇಲ್ಲಥರಸಿ” ಕೂಪನ್ ಯೋಜನೆಯನ್ನು ಭರವಸೆ ನೀಡಿದರು. ಈ ಯೋಜನೆಯು ಆದಾಯ ತೆರಿಗೆ ವ್ಯಾಪ್ತಿಗೆ ಬರದ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಸ್ಥಳೀಯ ಅಂಗಡಿಗಳಿಂದ ಟಿವಿ, ರೆಫ್ರಿಜರೇಟರ್ಗಳು, ವಾಷಿಂಗ್ ಮೆಷಿನ್ಗಳು ಮತ್ತು ಇಂಡಕ್ಷನ್ ಸ್ಟೌವ್ಗಳಂತಹ ವಸ್ತುಗಳನ್ನು ಖರೀದಿಸಲು ಅವರಿಗೆ ಅವಕಾಶ ನೀಡುತ್ತದೆ ಎಂದು ಸ್ಟಾಲಿನ್ ಹೇಳಿದರು.

ಮಹಿಳೆಯರನ್ನು ಕೇಂದ್ರಬಿಂದುವಾಗಿ ಇರಿಸಿದ್ದು, ನೇರ ನಗದು ನೆರವು, ಆರ್ಥಿಕ ನೆರವು ಮತ್ತು ಸಾಮಾಜಿಕ ಮೂಲಸೌಕರ್ಯ ಸೇರಿದಂತೆ ಬಹು-ಹಂತದ ಕಲ್ಯಾಣ ಅಭಿಯಾನವನ್ನು ಜಾರಿಗೆ ತಂದಿದ್ದಾರೆ. ಮಹಿಳೆಯರಿಗೆ ಮಾಸಿಕ ಸಹಾಯವನ್ನು 1,000 ರೂ.ಗಳಿಂದ 2,000 ರೂ.ಗಳಿಗೆ ದ್ವಿಗುಣಗೊಳಿಸುವುದಾಗಿ ಪಕ್ಷ ಭರವಸೆ ನೀಡಿದ್ದು, 1.37 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ. ಜೊತೆಗೆ ಉದ್ಯಮಶೀಲತೆಯನ್ನು ಹೆಚ್ಚಿಸಲು ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲವನ್ನು ನೀಡಲಾಗುತ್ತದೆ ಎಂದರು,
ರಾಜ್ಯಾದ್ಯಂತ 1,000 ಶಿಶುವಿಹಾರಗಳ ಸ್ಥಾಪನೆ. ವೃದ್ಧರ ಪಿಂಚಣಿಯನ್ನು ಹೆಚ್ಚಿಸುವುದು, ಈಗಿರುವ 5 ನೇ ತರಗತಿವರೆಗೆ ಇರುವ ಉಪಾಹಾರ ಯೋಜನೆಯನ್ನು 8 ನೇ ತರಗತಿಯವರೆಗೆ ವಿಸ್ತರಿಸುವುದು ಮತ್ತು 35 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ಗಳನ್ನು ಒದಗಿಸುವುದು ಪ್ರಮುಖ ಭರವಸೆಗಳಾಗಿವೆ. 1 ಲಕ್ಷ ರೂ.ಗಳ ಆರೋಗ್ಯ ವಿಮಾ ರಕ್ಷಣೆಯನ್ನು ಹೆಚ್ಚಿಸುವುದು ಮತ್ತು ಡಯಾಲಿಸಿಸ್ ಸೌಲಭ್ಯಗಳನ್ನು ವಿಸ್ತರಿಸುವುದನ್ನು ಪಕ್ಷವು ವಾಗ್ದಾನ ಮಾಡಿತು. ಪ್ರಣಾಳಿಕೆಯನ್ನು “ಸೂಪರ್ಸ್ಟಾರ್” ಎಂದು ವಿವರಿಸಿದ ಅವರು, ಮಹಿಳೆಯರು, ವಿದ್ಯಾರ್ಥಿಗಳು, ರೈತರು ಮತ್ತು ಮೀನುಗಾರರನ್ನು ಗುರಿಯಾಗಿಸಿಕೊಂಡು ಶಿಕ್ಷಣ, ಕೈಗಾರಿಕೆ ಮತ್ತು ಕೃಷಿ ಸೇರಿದಂತೆ ಕ್ಷೇತ್ರಗಳಲ್ಲಿ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದರು.

