ಮಂಗಳೂರು : ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಇಂಡಿಯಾನಾ ಆಸ್ಪತ್ರೆಯು ಏಪ್ರಿಲ್ 8 ರಿಂದ 14 ರವರೆಗೆ ರೂ. 399/-ಬೆಲೆಯ ಇಂಡಿಯಾನಾ ಆರೋಗ್ಯ ಗೋಲ್ಡ್ ಕಾರ್ಡ್ ನ್ನು ರೂ. 99ಕ್ಕೂ ಹಾಗೂ ಹೆಚ್ಚುವರಿಯಾಗಿ ಏಪ್ರಿಲ್ 7 ರ ಎಲ್ಲಾ ಹೊರರೋಗಿಗಳು ಮತ್ತು ಒಳರೋಗಿಗಳಿಗೆ ಇಂಡಿಯಾನಾ ಪ್ರಿವಿಲೇಜ್ ಸಿಲ್ವರ್ ಕಾರ್ಡ್ ಅನ್ನು ಉಚಿತವಾಗಿ ನೀಡುತ್ತಿದೆ ಎಂದು ಇಂಡಿಯಾನಾ ಆಸ್ಪತ್ರೆಯ ಅಧ್ಯಕ್ಷ ಡಾ. ಅಲಿ ಕುಂಬ್ಳೆ ತಿಳಿಸಿದರು.

ಅವರು ನಗರದ ಇಂಡಿಯಾನ ಆಸ್ಪತ್ರೆಯ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಡ್ ಹಲವಾರು ರಿಯಾಯಿತಿಯನ್ನು ಹೊಂದಿದ್ದು ರೋಗಿಗಳು ಇನ್-ಹೌಸ್ ವೈದ್ಯರ ಸಮಾಲೋಚನೆ ಶುಲ್ಕಗಳು ಮತ್ತು ಒಪಿ ಕಾರ್ಯವಿಧಾನಗಳಲ್ಲಿ ಶೇ. 20 ರಷ್ಟು ರಿಯಾಯಿತಿ, ಇನ್-ಹೌಸ್ ಪ್ರಯೋಗಾಲಯ ಮತ್ತು ರೇಡಿಯಾಲಜಿ ಸೇವೆಗಳಲ್ಲಿ ಶೇ. 15 ರಷ್ಟು ರಿಯಾಯಿತಿ, ವೈದ್ಯರ ಶುಲ್ಕಗಳು, ಔಷಧಿಗಳು ಮತ್ತು ಉಪಭೋಗ್ಯ ವಸ್ತುಗಳನ್ನು ಹೊರತುಪಡಿಸಿ ಐ.ಪಿ ಸೇವೆಗಳಲ್ಲಿ ಶೇ. 10 ರಷ್ಟು ರಿಯಾಯಿತಿ ಮತ್ತು ಒ.ಪಿ ಔಷಧಿ ಶುಲ್ಕಗಳಲ್ಲಿ ಶೇ. 5 ರಷ್ಟು ರಿಯಾಯಿತಿಯನ್ನು ಇದು ಹೊಂದಿದೆ ಎಂದರು.

ಇಂಡಿಯಾನಾ ಆಸ್ಪತ್ರೆಯ ನಿರ್ದೇಶಕ ಡಾ. ನಿಹಾಲ್ ಅಲಿ ಕುಂಬ್ಳೆ ಮಾತನಾಡಿ ,ಆರೋಗ್ಯದ ಕಾಳಜಿ ನಮ್ಮಲ್ಲಿ ಅಗತ್ಯವಾಗಿ ಬೇಕಾಗುತ್ತದೆ .ವಿಶ್ವ ಅರೋಗ್ಯ ಸಂಸ್ಥೆಯು ಅದನ್ನೇ ಪ್ರತಿಪಾದಿಸುತ್ತದೆ. ಇಂಡಿಯಾನಾ ಆಸ್ಪತ್ರೆಯು ಅರೋಗ್ಯ ಸಮಾಜದ ನಿರ್ಮಾಣದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ, ಇಂಡಿಯಾನಾ ಆಸ್ಪತ್ರೆ ಕೈಗೆಟುಕುವ ವೆಚ್ಚದಲ್ಲಿ ಸಹಾನುಭೂತಿಯ ಆರೈಕೆ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸಲು ಬದ್ಧವಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಗೋಲ್ಡ್ ಕಾರ್ಡ್ನ್ನು ಬಿಡುಗಡೆಗೊಳಿಸಲಾಯಿತು
ಪತ್ರಿಕಾಗೋಷ್ಠಿಯಲ್ಲಿ ಇಂಡಿಯಾನ ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ.ಅಪೂರ್ವ ಶ್ರೀಜಯದೇವ, ಕನ್ಸಲ್ಟೆಂಟ್ ಫಿಸಿಶಿಯನ್, ಇಂಟೆನ್ಸಿವಿಸ್ಟ್, ಡಯಾಬಿಟಾಲಜಿಸ್ಟ್ ಡಾ.ಆದಿತ್ಯ ಭಾರದ್ವಾಜ್, ಸಮೂಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಇ.ವಿಜಯ್ ಚಂದ್ರ ಉಪಸ್ಥಿತರಿದ್ದರು .

