ನವದೆಹಲಿ : ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಮಣಿಸರ ಮಾರಾಟಗಾರ್ತಿ ಮತ್ತು ರಾತ್ರೋರಾತ್ರಿ ಸಾಮಾಜಿಕ ಮಾಧ್ಯಮ ತಾರೆಯಾಗಿದ್ದ ಮೊನಾಲಿಸಾ ಅಪ್ರಾಪ್ತ ವಯಸ್ಕಳಾಗಿದ್ದು, ಅವರ ಪತಿ ಫರ್ಮಾನ್ ಖಾನ್ ವಿರುದ್ಧ ಗಂಭೀರ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗ (ಎನ್ಸಿಎಸ್ಟಿ) ನಡೆಸಿದ ವಿಚಾರಣೆಯ ನಂತರ ಆಘಾತಕಾರಿ ಸಂಗತಿ ಬಹಿರಂಗವಾಗಿದ್ದು, ಮೊನಾಲಿಸಾ ವಿವಾಹವಾದಾಗ ಆಕೆ ಅಪ್ರಾಪ್ತ ವಯಸ್ಕಳಾಗಿದ್ದಳು ಎಂದು ದ್ರಡಪಡಿಸಿದೆ.

ಎನ್ಸಿಎಸ್ಟಿ ಅಧ್ಯಕ್ಷ ಅಂತರ್ ಸಿಂಗ್ ಆರ್ಯ ಅವರ ಮೇಲ್ವಿಚಾರಣೆಯಲ್ಲಿ ನಡೆದ ತನಿಖೆಯಲ್ಲಿ, ಮೊನಾಲಿಸಾ ಪಾರ್ಧಿ ಬುಡಕಟ್ಟು ಸಮುದಾಯಕ್ಕೆ ಸೇರಿದವಳು ಮತ್ತು ಅಪ್ರಾಪ್ತ ವಯಸ್ಕಳು ಎಂದು ಕಂಡು ಬಂದಿದೆ.
ಮಹೇಶ್ವರದ ಅಧಿಕೃತ ಆಸ್ಪತ್ರೆ ದಾಖಲೆಗಳ ಪ್ರಕಾರ, ಅವರು ಡಿಸೆಂಬರ್ 30, 2009 ರಂದು ಜನಿಸಿದರು, ಮಾರ್ಚ್ 11, 2026 ರಂದು ಅವರ ವಿವಾಹದ ಸಮಯದಲ್ಲಿ ಅವರಿಗೆ 16 ವರ್ಷಕ್ಕಿಂತ ಸ್ವಲ್ಪ ಹೆಚ್ಚು ವಯಸ್ಸಾಗಿತ್ತು

ಕೇರಳದಲ್ಲಿ ನಕಲಿ ಜನನ ಪ್ರಮಾಣಪತ್ರವನ್ನು ಬಳಸಿಕೊಂಡು ಆಕೆಯನ್ನು ವಯಸ್ಕಳೆಂದು ತಪ್ಪಾಗಿ ಬಿಂಬಿಸಲಾಗಿದ್ದು, ಆ ವಿವಾಹವನ್ನು ನಡೆಸಲಾಗಿದೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ

ಈ ತನಿಖೆಯ ನಂತರ, ಮೊನಾಲಿಸಾಳ ಬುಡಕಟ್ಟು ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಖಾನ್ ವಿರುದ್ಧ ಪೋಕ್ಸೊ ಕಾಯ್ದೆ, ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಮತ್ತು ಎಸ್ಸಿ/(ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ನಿಬಂಧನೆಗಳು ಸೇರಿದಂತೆ ಹಲವಾರು ಆರೋಪಗಳನ್ನು ಹೊರಿಸಿದ್ದಾರೆ.

ಈ ಪ್ರಕರಣವು ರಾಜಕೀಯ ಗಮನವನ್ನೂ ಸೆಳೆದಿದೆ, ಕೆಲವು ಸಂಸ್ಥೆಗಳು ಮತ್ತು ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ,
ಕೇರಳ ಮತ್ತು ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿರುವ ಎನ್ಸಿಎಸ್ಟಿ, ಏಪ್ರಿಲ್ 22 ರಂದು ನವದೆಹಲಿಯಲ್ಲಿ ಆಯೋಗದ ಮುಂದೆ ಹಾಜರಾಗುವಂತೆ ನಿರ್ದೇಶಿಸಿದೆ


