ಮುಂಬೈ : ಭಾರತೀಯ ಚಿತ್ರರಂಗದ ದಿಗ್ಗಜ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ತಮ್ಮ 92ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ ನಿನ್ನೆಯಷ್ಟೇ ಹೃದಯಾಘಾತವಾಗಿತ್ತು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇಡೀ ಭಾರತೀಯ ಚಿತ್ರರಂಗವು ಒಬ್ಬ ಶ್ರೇಷ್ಠ ಕಲಾವಿದೆಯನ್ನು ಕಳೆದುಕೊಂಡಂತಾಗಿದೆ. ನಾಳೆ ಬೆಳಿಗ್ಗೆ 11 ಗಂಟೆಯವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ. ಸಂಜೆ 4 ಗಂಟೆಗೆ ಶಿವಾಜಿ ಪಾರ್ಕ್ನಲ್ಲಿ ಅಂತ್ಯಕ್ರಿಯೆ ನಡೆಲಿದೆ.

1933 ರ ಸೆಪ್ಟೆಂಬರ್ 8 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ಆಶಾ ಭೋಸ್ಲೆ ಅವರ ಮೂಲ ಹೆಸರು ಆಶಾ ಮಂಗೇಶ್ಕರ್. ಸಂಗೀತ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರ ಸಹೋದರಿಯಾಗಿರುವ ಆಶಾ, ಕೇವಲ 10 ವರ್ಷದಲ್ಲೇ ತಂದೆಯನ್ನು ಕಳೆದುಕೊಂಡರು. 1940 ರ ಪ್ರಸ್ತುತದಲ್ಲಿ ತಮ್ಮ 10ನೇ ವಯಸ್ಸಿನ ಹಿನ್ನೆಲೆ ಗಾಯನ ವೃತ್ತಿ ಆರಂಭಿಸಿದರು. ಅವರ ಕಂಚಿನ ಕಂಠ ಸಂಗೀತ ಪ್ರೇಮಿಗಳ ಮನದಲ್ಲಿ ಸದಾ ಜೀವಂತವಾಗಿರಲಿದೆ.

ಆಶಾ ಭೋಸ್ಲೆ ತಮ್ಮ ಸಂಗೀತ ಪ್ರಯಾಣದಲ್ಲಿ 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಹಿಂದಿ, ಮರಾಠಿ, ಬಂಗಾಳಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಪಂಜಾಬಿ, ಗುಜರಾತಿ, ಒರಿಯಾ, ಅಸ್ಸಾಮಿ ಸೇರಿದಂತೆ 20ಕ್ಕೂ ಹೆಚ್ಚು ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಹಾಡಿದ್ದಾರೆ. ಹಾಡುಗಾರಿಕೆಯ ಜೊತೆಗೆ ಆಶಾ ಭೋಸ್ಲೆ 2013ರಲ್ಲಿ ‘ಮಾಯಿ’ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಮೂಲಕ ಅವರು ತಮ್ಮ ನಟನಾ ಪ್ರತಿಭೆಯನ್ನು ಪ್ರದರ್ಶಿಸಿದರು.

ಆಶಾ ಭೋಸ್ಲೆ ಅವರ ಸಾಧನೆಗಾಗಿ ಭಾರತ ಸರ್ಕಾರ 2000ದಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇದರ ಜೊತೆಗೆ 2008ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಹ ಅವರಿಗೆ ಸಂದಿದೆ. ಹಲವಾರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆಶಾ ಭೋಸ್ಲೆ ಅವರ ವೈಯಕ್ತಿಕ ಜೀವನ ಸಂಕಷ್ಟಗಳಿಂದ ಕೂಡಿತ್ತು. ಅವರ ಪುತ್ರ ಹೇಮಂತ್ ಭೋಸ್ಲೆ (2015), ಪುತ್ರಿ ವರ್ಷಾ ಭೋಸ್ಲೆ ಮತ್ತು ಇತರ ಪುತ್ರ ವೈಷ್ಣವ್ ಭೋಸ್ಲೆ ಅಗಲಿದ್ದಾರೆ. ಕೊನೆಯ ಪುತ್ರ ಆನಂದ್ ಭೋಸ್ಲೆ ಮಾತ್ರ ಜೀವಂತವಾಗಿದ್ದಾರೆ. ಮೂವರು ಮಕ್ಕಳನ್ನು ಅಗಲಿರುವ ಈ ಖ್ಯಾತ ಗಾಯಕಿಯ ನಿಧನಕ್ಕೆ ದೇಶದ ಗಣ್ಯರು, ಚಿತ್ರರಂಗದ ತಾರೆಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.




