ವಾಷಿಂಗ್ಟನ್: ಶ್ವೇತಭವನದಲ್ಲಿ ನಡೆಸಿದ ಭೋಜನ ಕೂಟದ ವೇಳೆ ಗುಂಡಿನ ದಾಳಿ ನಡೆದಿದೆ. ಇದರ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಅವರನ್ನು ಕೂಡಲೇ ಭದ್ರತಾ ಸಿಬ್ಬಂದಿಗಳು ಸ್ಥಳಾಂತರಿಸಿದ್ದಾರೆ.
ಶನಿವಾರ ರಾತ್ರಿ ವೈಟ್ ಹೌಸ್ ಹಿಲ್ಟನ್ ಹಾಲ್ನಲ್ಲಿ ಔತಣಕೂಟ ನಡೆದಿತ್ತು. ಆ ಸಮಯದಲ್ಲಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಸಂಪುಟ ಸದಸ್ಯರು ಸ್ಥಳದಲ್ಲಿ ಹಾಜರಿದ್ದರು. ಗುಂಡಿನ ಸದ್ದು ಕೇಳಿದ ತಕ್ಷಣ ಭದ್ರತಾ ಅಧಿಕಾರಿಗಳು ಸ್ಥಳವನ್ನು ಸುತ್ತುವರೆದು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ,
ಹೋಟೆಲ್ನಲ್ಲಿ ಬಂದೂಕುಧಾರಿ ಇದ್ದಾನೆ ಎಂಬ ಆತಂಕಗಳು ಹುಟ್ಟಿಕೊಂಡಿದ್ದರಿಂದ ಭಯಭೀತ ವಾತಾವರಣ ನಿರ್ಮಾಣವಾಗಿತ್ತು. ಇಲ್ಲಿಯವರೆಗೆ ಯಾರಿಗೂ ಗಾಯಗಳಾಗಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದೆ. ನಂತರ ಭೋಜನ ಕಾರ್ಯಕ್ರಮ ಪುನರಾರಂಭವಾಯಿತು. ಟ್ರಂಪ್ ಕಾರ್ಯಕ್ರಮಕ್ಕೆ ಮರಳಲು ಸಿದ್ಧತೆ ನಡೆಸಿದರು, ಆದರೆ ಅಮೆರಿಕದ ಅಧಿಕಾರಿಗಳು ಅವರಿಗೆ ಅವಕಾಶ ನೀಡಲಿಲ್ಲ.

ಗುಂಡು ಹಾರಿಸಿದ ವ್ಯಕ್ತಿಯೋರ್ವನ ಫೋಟೋವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಡುಗಡೆ ಮಾಡಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಕ್ಯಾಲಿಫೋರ್ನಿಯಾದ ಟೊರೆನ್ಸ್ನ ಕೋಲ್ ಥಾಮಸ್ ಅಲೆನ್ (31) ಎಂದು ಗುರುತಿಸಲಾಗಿದೆ.

