ರಾಯಚೂರು : ಯಾದಗಿರಿ ಪಿಎಸ್ಐ ವೀರೇಶ್ ಮತ್ತು ಕಾನ್ಸ್ಟೇಬಲ್ ವಿಜಯಶ್ರೀ ಕಳೆದ 8 ವರ್ಷಗಳಿಂದ ಲಿವ್-ಇನ್ ಸಂಬಂಧ ಹೊಂದಿದ್ದು. ಈಗ ವಿಜಯಶ್ರೀ ಬೇರೆ ಮದುವೆಗೆ ಸಜ್ಜಾಗಿದ್ದಾರೆಂದು ವೀರೇಶ್ ರಾಯಚೂರು ಎಸ್ಪಿ ಅವರಿಗೆ ದೂರು ನೀಡಿದ್ದಾರೆ.
ಯಾದಗಿರಿಯ ಶಹಾಪುರದಲ್ಲಿ ಗುಪ್ತಚರ ಇಲಾಖೆಯಲ್ಲಿ ಪಿಎಸ್ಐ ಆಗಿರುವ ವಿರೇಶ್ ಮತ್ತು ಕಾನ್ಸ್ಟೇಬಲ್ ವಿಜಯಶ್ರೀ 2017 ರಿಂದ ಪ್ರೀತಿಸುತ್ತಿದ್ದರು. ವಿಜಯಪುರದಲ್ಲಿ ವಿದ್ಯಾಭ್ಯಾಸ ಮಾಡುವಾಗ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು.ವಿರೇಶ್ ಪಿಎಸ್ಐ ಆಗಿ ನೇಮಕಗೊಂಡ ಬಳಿಕ, ವಿಜಯಶ್ರೀ ಕೂಡ ಕಾನ್ಸ್ಟೇಬಲ್ ಆಗಿ ಕೆಲಸಕ್ಕೆ ಸೇರಿದ್ದರು. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಕೆಲಸ ಮಾಡುವಾಗ ಇಬ್ಬರೂ ನಾಲ್ಕು ವರ್ಷಗಳ ಕಾಲ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು. ಅಷ್ಟೇ ಅಲ್ಲದೆ, ದೇವಸ್ಥಾನವೊಂದರಲ್ಲಿ ಹಾರ ಬದಲಾಯಿಸಿಕೊಂಡು ಮದುವೆ ಕೂಡಾ ಆಗಿದ್ದರು.
ವಿಜಯಶ್ರೀ ನನ್ನಿಂದ ಸುಮಾರು 35 ಲಕ್ಷ ರೂಪಾಯಿ ಹಣ ಪಡೆದಿದ್ದಾಳೆ. ಎರಡು ಬಾರಿ ಗರ್ಭಿಣಿಯಾಗಿದ್ದಾಗ ನನಗೆ ತಿಳಿಯದಂತೆ ಅಬಾರ್ಷನ್ ಮಾಡಿಸಿದ್ದಾಳೆ. ಈಗ ಅಧಿಕೃತವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳೋಣ ಅಂದಾಗ ಜಾತಿಯ ನೆಪ ಹೇಳಿ ಬೇರೆ ಯುವಕನ ಜೊತೆ ಮದುವೆಗೆ ಸಜ್ಜಾಗಿದ್ದಾಳೆ” ಅಲ್ಲದೆ ವಿಜಯಶ್ರೀ ಅವರ ಮದುವೆ ಇದೇ ಮೇ 7 ರಂದು ರಾಯಚೂರಿನಲ್ಲಿ ನಿಶ್ಚಯವಾಗಿದೆ. ತನಗೆ ನ್ಯಾಯ ಸಿಗಬೇಕು ಮತ್ತು ಈ ಮದುವೆ ನಡೆಯಬಾರದು ಎಂದು ವಿರೇಶ್ ಈಗ ಆನ್ಲೈನ್ ಮೂಲಕ ರಾಯಚೂರು ಎಸ್ಪಿಯವರಿಗೆ ದೂರು ನೀಡಿದ್ದಾರೆ,

