ಉಳ್ಳಾಲ: ಉಳ್ಳಾಲ ಪುರಸಭೆಗೆ ಎರಡು ಬಾರಿ ಕಾಪಿಕಾಡು ವಾರ್ಡಿನಿಂದ ಸ್ಪರ್ಥಿಸಿ ಕೌನ್ಸಿಲರ್ ಆಗಿದ್ದ ಭವಾನಿ (70) ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.
ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿವಾಸಿಯಾದ ಭವಾನಿ ಇವರು ಅವಿವಾಹಿತರಾಗಿದ್ದು ,ಬಿಜೆಪಿ ಸಕ್ರಿಯ ಮಹಿಳಾ ಸದಸ್ಯೆಯಾಗಿದ್ದರು. ಪುಲ್ಕೆದಡಿ ಆದಿ ಕ್ಷೇತ್ರ ಬಂಡಿಕೊಟ್ಯ ಕೋರ್ದಬ್ಬು ದೈವಸ್ಥಾನದ ಸಮಿತಿಯಲ್ಲಿ ಸಕ್ರಿಯ ಸದಸ್ಯೆಯಾಗಿದ್ದರು. ಉಳ್ಳಾಲ ಪುರಸಭೆಗೆ ಎರಡು ಬಾರಿ ಕೌನ್ಸಿಲರ್ ಆಗಿ ಆಯ್ಕೆಗೊಂಡು ಒಂದು ಬಾರಿ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದರು.

