ಧಾರವಾಡ : ಇಲ್ಲಿಯ ಕಡಪಾ ಮೈದಾನದ (ಡಾ.ಮಲ್ಲಿಕಾರ್ಜುನ ಮನಸೂರ ಕಲಾ ಭವನದ) ಎದುರಿಗೆ ಇರುವ ನಗರದ ಪ್ರತಿಷ್ಠಿತ ಶಿಕ್ಷಕಿಯರ ಸರಕಾರಿ ತರಬೇತಿ ಸಂಸ್ಥೆ(ಟಿಸಿಡಬ್ಲೂ) ಪ್ರಸ್ತುತ 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ಕನ್ನಡ, ಉರ್ದು ಹಾಗೂ ಇಂಗ್ಲೀಷ ಮಾಧ್ಯಮದ ಡಿಪ್ಲೋಮಾ ಇನ್ ಎಲೆಮೆಂಟರಿ ಎಜ್ಯುಕೇಷನ್ (ಡಿ.ಇಎಲ್.ಇಡಿ) ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಇಲ್ಲಿ ಡಿ.ಇಎಲ್.ಇಡಿ ತರಬೇತಿ ಪಡೆಯಲು ಅವಕಾಶವಿದ್ದು, ಕಲಾ, ವಿಜ್ಞಾನ ಇಲ್ಲವೇ ವಾಣಿಜ್ಯ ವಿಷಯದಲ್ಲಿ ಪಿ.ಯು.ಸಿ. ಪಾಸಾದವರು, ಜೊತೆಗೆ ಯಾವುದೇ ಪದವೀಧರ ವಿದ್ಯಾರ್ಥಿನಿಯರೂ ಸಹ ಡಿ.ಇಎಲ್.ಇಡಿ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವರ್ಗದವರು ಶೇಕಡಾ 50 ಮತ್ತು ಎಸ್.ಸಿ, ಎಸ್.ಟಿ. ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳು ಶೇಕಡಾ 45 ಅಂಕ ಪಡೆದಿರಬೇಕು.

ಡಿ.ಇಎಲ್.ಇಡಿ ತರಬೇತಿ ಪಡೆಯುವುದರಿಂದ ಸರಕಾರಿ ಇಲ್ಲವೇ ಖಾಸಗಿ ಶಾಲೆಗಳಲ್ಲಿ ಶಿಕ್ಷಕ ಹುದ್ದೆ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಟಿ.ಇ.ಟಿ ಮತ್ತು ಸಿ.ಇ.ಟಿ. ಪರೀಕ್ಷೆ ಕೋಚಿಂಗ್, ಕಂಪ್ಯೂಟರ ತರಬೇತಿ ಉಚಿತವಾಗಿ ನೀಡಲಾಗುವುದು. ನುರಿತ ಸಿಬ್ಬಂದಿ ವರ್ಗದ ಜೊತೆಗೆ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಹಾಗೂ ವಿದ್ಯಾರ್ಥಿ ವೇತನ ಸೌಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9480131262 ಅಥವಾ 9945814300 ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ ಪ್ರವೇಶ ಪಡೆಯುವಂತೆ ಸಂಸ್ಥೆಯ ಪ್ರಾಚಾರ್ಯ ಡಾ. ರವಿಕುಮಾರ ಬಾರಾಟಕ್ಕೆ ಮಾಧ್ಯಮ ಪ್ರಕಟಣೆಯಲ್ಲಿ ಕೋರಿದ್ದಾರೆ.

