ರಾಜಸ್ಥಾನ : ರಾಜಸ್ಥಾನದ ಭಿವಾಡಿ ಜಿಲ್ಲೆಯ ಮದರಸಾವೊಂದರಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ಆರೋಪಿ ಮದರಸಾದ ಧರ್ಮ ಗುರುವಿನ ಮಗ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿನಿ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ಅಧ್ಯಯನಕ್ಕಾಗಿ ಮದರಸಾದಲ್ಲಿ ತಂಗಿದ್ದರು. ಆರೋಪಿ ಧರ್ಮ ಗುರುವಿನ ಮಗ ಮೇ 2 ಮತ್ತು ಮೇ 7 ರಂದು ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ವಿರೋಧಿಸಿದಾಗ, ಆಕೆಗೆ ಬೆದರಿಕೆ ಹಾಕಲಾಗಿದೆ” ಎಂದು ರಾಜಸ್ಥಾನ ಪೊಲೀಸ್ ಸೇವೆಯ (ಆರ್ಪಿಎಸ್) ತರಬೇತಿ ಅಧಿಕಾರಿ ಕಪಿಲ್ ಗುಪ್ತಾ, ಹೇಳಿದ್ದಾರೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮಂಗಳವಾರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು ಅವನಿಗಾಗಿ ಹುಡುಕಾಟ ನಡೆಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

