ಭೋಪಾಲ್ : ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ತಿರುವನಂತಪುರಂ-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್ಪ್ರೆಸ್ನ ಎಸಿ ಕೋಚ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. 68 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲಿನ (12431) ಬಿ -1 ಕೋಚ್ನಲ್ಲಿ ಬೆಳಿಗ್ಗೆ 5.15 ಕ್ಕೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ರೈಲ್ವೆಯ ಹಿರಿಯ ವಾಣಿಜ್ಯ ವ್ಯವಸ್ಥಾಪಕಿ ಸೌರ್ಬಾ ಜೈನ್ ತಿಳಿಸಿದ್ದಾರೆ.
ಘಟನೆಯು ಮಧ್ಯಪ್ರದೇಶದ ಲೂನಿ ರಿಚ್ಛಾ (LNR) ಮತ್ತು ವಿಕ್ರಮ್ಗಢ್ ಅಲೋಟ್ (VMA) ನಿಲ್ದಾಣಗಳ ಮಧ್ಯೆ ಸಂಭವಿಸಿದೆ. ಬೆಂಕಿ ತಗುಲಿದ್ದು ಗಮನಕ್ಕೆ ಬರುತ್ತಿದ್ದಂತೆ ರೈಲ್ವೆ ಸಿಬ್ಬಂದಿಗಳು ತಕ್ಷಣ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಬೆಂಕಿ ತಗುಲಿದ ಕೋಚ್ ಅನ್ನು ರೈಲಿನಿಂದ ಬೇರ್ಪಡಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ.

