ಬಂಟ್ವಾಳ: ತಾಲೂಕಿನ ರೆಂಜನ್ ಪದವಿನ ಶುಭಲಕ್ಷ್ಮೀ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಜೇತೇಶ್ ಹಾಗೂ ಶರಣ್ಯ ಅವರ ವಿವಾಹ ಸಮಾರಂಭದಲ್ಲಿ ಸಮಾಜಮುಖಿ ಉದ್ದೇಶದ ‘ಗೋ ಸಮ್ಮಾನ್’ ಅಭಿಯಾನಕ್ಕೆ ಸಹಿ ಸಂಗ್ರಹಿಸಲಾಯಿತು. ಮದುವೆ ಸಂಭ್ರಮದ ನಡುವೆಯೂ ಗೋ ರಕ್ಷಣೆ ಹಾಗೂ ಜಾಗೃತಿಯ ಈ ವಿನೂತನ ಪ್ರಯತ್ನಕ್ಕೆ ಸಮಾರಂಭಕ್ಕೆ ಆಗಮಿಸಿದ ಅತಿಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಗೋಸೇವಾ ವಿಭಾಗ ಪ್ರಮುಖ್ ಗಂಗಾಧರ್, ಗೊಸಮ್ಮನ್ ಜಿಲ್ಲಾ ಸಹ ಪ್ರಭಾರಿ ಅಶೋಕ ಇಳಂತಿಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಸಹಿ ಹಾಕುವ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಿದರು. ನವದಂಪತಿಗಳ ಈ ಪರಿಸರ ಹಾಗೂ ಸಮಾಜಪರ ಕಾಳಜಿಯನ್ನು ಗಣ್ಯರು ಹಾಗೂ ಸಾರ್ವಜನಿಕರು ಶ್ಲಾಘಿಸಿದರು.

