ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಜಪ್ಪಿನಮೊಗರು ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಇಂದಿನಿಂದ ಸೆಪ್ಟೆಂಬರ್ 15ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಜಪ್ಪಿನಮೊಗರಿನಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕಾಗಿ ನಗರದ ವಿ.ಟಿ. ರಸ್ತೆಯ ನಳಂದ ಶಾಲೆಯ ಸಮೀಪದ ಪ್ರದೇಶದಿಂದ ಗಣಪನ ಮೂರ್ತಿಯನ್ನು ಮೆರವಣಿಗೆಯ ಮೂಲಕ ಜಪ್ಪಿನಮೊಗರಿಗೆ ಕೊಂಡೊಯ್ಯಲಾಯಿತು.
ಗಣಪನನ್ನು ಸ್ವಾಗತಿಸಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜೆ. ನಾಗೇಂದ್ರ ಕುಮಾರ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಗಣಪನ ಮೂರ್ತಿಯನ್ನು ಕೊಂಡೊಯ್ಯುವ ಮುನ್ನ ಅದನ್ನು ನಿರ್ಮಿಸಿದ ಕಲಾವಿದರು ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಿ ದೇವರ ಮೂರ್ತಿಯನ್ನು ಸಮಿತಿಯವರಿಗೆ ಹಸ್ತಾಂತರಿಸಿದರು.
ಬಳಿಕ ಚೆಂಡೆ ಹಾಗೂ ಕೊಂಬು ವಾದ್ಯಗಳ ನಾದದೊಂದಿಗೆ ಗಣಪನ ಮೂರ್ತಿಯನ್ನು ಅಲಂಕರಿಸಿದ ಲಾರಿಯಲ್ಲಿ ಪ್ರತಿಷ್ಠಾಪಿಸಿ, ಭಕ್ತರ ಸಮ್ಮುಖದಲ್ಲಿ ಜಪ್ಪಿನಮೊಗರಿನತ್ತ ಕೊಂಡೊಯ್ಯಲಾಯಿತು. ಈ ವೇಳೆ ಭಕ್ತರು ಭಕ್ತಿಭಾವದಿಂದ ಗಣಪನಿಗೆ ಜಯಘೋಷ ಮೊಳಗಿಸಿದರು.

ಮಂಗಳೂರು ಮಿತ್ರ

