ಮಂಗಳೂರು : ಸಂಗೀತ ಹಾಗೂ ಸಾಂಸ್ಕೃತಿಕ ಕಲೆಗಳ ಸ್ಪರ್ಧೆ ಗಳಲ್ಲಿ ಸೋಲು ಗೆಲುವಿನ ಪ್ರಶ್ನೆಗಿಂತ ಅನುಭವದ ಹೆಚ್ಚಳಕ್ಕಾಗಿ ಕಲಿಕೆಯಲ್ಲಿ ಸ್ಪರ್ಧಾ ಛಲವಿರಬೇಕು ಎಂದು ವಿಶ್ವವಿದ್ಯಾನಿಲಯ ಪ್ರಾಂಶುಪಾಲರಾದ ಜಯವಂತ ನಾಯಕ್ ಹೇಳಿದರು. ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇವರು ಆಯೋಜಿಸಿದ ಸ್ವರ ಕುಡ್ಲ ಸಂಗೀತ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಕ್ಕೂಟದ ಅಧ್ಯಕ್ಷ ಧನುರಾಜ್ ಅತಾವರ ಅಧ್ಯಕ್ಷತೆ ವಹಿಸಿದ್ದರು. ಯೆನೊಪೋಯ ಆಸ್ಪತ್ರೆಯ ಸೀನಿಯರ್ ಸರ್ಜನ್ ಹಾಗೂ ಗಾಯಕರಾದ ಡಾಕ್ಟರ್ ಕುಂಬ್ಳೆ ಅನಂತ ಪ್ರಭು ಗೀತೆ ಹಾಡಿ ಸ್ಪರ್ಧೆಗೆ ಚಾಲನೆ ನೀಡಿದರು. ನಿವ್ರತ್ತ ಎಸ್ಪಿ ರಾಮದಾಸ್ ಗೌಡ, ಸ್ಥಾಪಕ ಅಧ್ಯಕ್ಷ ಸದಾಶಿವ ದಾಸ್ ಪಾಂಡೇಶ್ವರ ಮುಖ್ಯ ಅಬ್ಯಾಗತರಾಗಿ ಭಾಗವಹಿಸಿ ಶುಭಕೋರಿದರು.

ಒಕ್ಕೂಟದ ಮಾಜಿ ಅಧ್ಯಕ್ಷರುಗಳಾದ ಮಹಮದ್ ಇಕ್ಬಾಲ್ ನವಗಿರಿ, ಗಣೇಶ್ ರಮೇಶ್ ಸಾಲ್ಯಾನ್ ,ದಾಮೋದರ್ ಭಾಗವತ್ , ದೀಪಕ್ ರಾಜ್ ಉಳ್ಳಾಲ್, ಕೇಶವ ಕನಿಲ, ಉಪಾಧ್ಯಕ್ಷ ರಾಮ್ ಕುಮಾರ್ ,ಉಡುಪಿ ವಲಯದ ರಾಧಾಕೃಷ್ಣ ಭಟ್ ,ಸುಭಾಷಿತ್, ಮುಕ್ತಾರಾವ್ ಮತ್ತಿತರರು ಉಪಸ್ಥಿತರಿದ್ದರು.
ಖಜಾಂಚಿ ಮಲ್ಲಿಕಾ ಶೆಟ್ಟಿ ,ಸಂಘಟನಾ ಕಾರ್ಯದರ್ಶಿ ಹರಿಣಿ ಉದಯ್ ಸಹಕರಿಸಿದರು. ಗೌರವ ಸಲಹೆಗಾರ ಪುಷ್ಕಳ ಕುಮಾರ್ ಸ್ವಾಗತಿಸಿದರು. ಮುರಳೀಧರ ಕಾಮತ್, ಕೋಕಿಲ ವಿಜಯ್, ವಿನಯ ಉಡುಪಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಲಕ್ಷ್ಮೀಶ ಸುವರ್ಣ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗುರುಪ್ರಿಯ ವಂದಿಸಿದರು.
ಮಂಗಳೂರು ಮಿತ್ರ

