ಬೆಂಗಳೂರು : ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಮುಖಂಡರ ನಿಯೋಗವು ಬುಧವಾರ ಭೇಟಿ ಮಾಡಿ ಕೆಪಿಎಸ್ಸಿಯನ್ನು ಭ್ರಷ್ಟಚಾರದಿಂದ ಮುಕ್ತಗೊಳಿಸಿ ಪಾರದರ್ಶಕ ನೇಮಕಾತಿಗೆ ಆದ್ಯತೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಮಾಜಿ ಸಂಸದರಾದ ಉಗ್ರಪ್ಪ , ಬಿ ಎಲ್ ಶಂಕರ್, ಎಲ್ ಹನುಮಂತಯ್ಯ, ಚಂದ್ರಪ್ಪ, ಮುದ್ದಹನುಮೇಗೌಡ, ಮಾಜಿ ಸಚಿವರಾದ ಪಿ ಜಿ ಆರ್ ಸಿಂಧ್ಯಾ, ಹೆಚ್ ಎಂ ರೇವಣ್ಣ, ರಾಣಿ ಸತೀಶ್, ಮಾಜಿ ಸಭಾಪತಿ ವಿ ಆರ್ ಸುದರ್ಶನ್, ಮಾಜಿ ಶಾಸಕರಾದ ಪಿ ಆರ್ ರಮೇಶ್, ಕೊಂಡಜ್ಜಿ ಮೋಹನ್, ಹಿರಿಯ ಸಾಹಿತಿ ಸಿ ಎಸ್ ದ್ವಾರಕನಾಥ್ ಮತ್ತಿತರರು ಇದ್ದರು.

