ಬಂಟ್ವಾಳ: ‘ಗೋಸನ್ಮಾನ್ ಅಭಿಯಾನ’ದ ಸಹಿ ಸಂಗ್ರಹ ಕಾರ್ಯಕ್ರಮದ ಅಂಗವಾಗಿ ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಮಠಕ್ಕೆ ಭೇಟಿ ನೀಡಿ, ಪರಮಪೂಜ್ಯ ಶ್ರೀಗಳ ದಿವ್ಯ ಆಶೀರ್ವಾದ ಪಡೆಯಲಾಯಿತು.

ಇದೇ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಪ್ರಭಾರಿ ಶ್ರೀ ಸಚಿನ್ ಮೇಲ್ಕಾರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಪ್ರಭಾರಿ ಶ್ರೀ ಅಶೋಕ್ ಇಳಂತಿಲ ಅವರ ಉಪಸ್ಥಿತಿಯಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗೋಸನ್ಮಾನ್ ಅಭಿಯಾನದ ತಾಲೂಕು ಮಠ-ಮಂದಿರಗಳ ಪ್ರಮುಖರಾದ ಶ್ರೀ ಶಿವಾನಂದ ಶೆಟ್ಟಿ, ಶ್ರೀ ರಮೇಶ್ ರಾವ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಮಂಗಳೂರು ಮಿತ್ರ

