ಮಂಗಳೂರು : ಇಂದು ದೇಶ ವಿರೋಧಿಗಳು ವ್ಯತ್ತಿರಿಕ್ತ ಅಭಿಪ್ರಾಯಗಳನ್ನು ನೀಡುತ್ತಾ ದಾರಿತಪ್ಪಿಸುತ್ತಿದ್ದಾರೆ. ಆ ಕಾಲಕ್ಕೆ ನಮಗೆ ನಮ್ಮ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡದೇ ಹೋದರೆ ದಾರಿ ತಪ್ಪಿ ದೇಶ ದ್ವೇಷಿಸುವ ಪ್ರಮೇಯ ಬರಬಹುದು. ಆದರೆ ರಾಷ್ಟ್ರ ಪ್ರೇಮಿಗಳಲ್ಲಿ ಪ್ರೇರಣೆ ಉಂಟಾಗಬೇಕಾದರೆ ಆದರ್ಶ ವ್ಯಕ್ತಿತ್ವ ಬೇಕಾಗುತ್ತದೆ. ಒಬ್ಬ ವೀರಯೋಧನಾಗಿ, ಸಾಹಸಿಗನಾಗಿ ಕ್ಯಾ.ಸ್ಮಿತ್ ಮಚ್ಟಾರ್ ನಮಗೆಲ್ಲಾ ಆದರ್ಶರಾಗಿನಿಲ್ಲುತ್ತಾರೆ. ಅಂತಹಾ ಕಠಿಣ ಸಂದರ್ಭದಲ್ಲೂ ಪ್ರಾಣದ ಹಂಗು ತೊರೆದು ಹೋರಾಡಿ ನೂರಾಎಂಭತ್ತುಜೀವಗಳನ್ನು ಉಳಿಸಿದ್ದಾನೆ. ದೇಶ ಪ್ರೀತಿಯನ್ನು ಮೆರೆದಿದ್ದಾನೆ. ಇಂದಿನ ದಿನ ಅನೇಕ ವಿದ್ಯಾರ್ಥಿಗಳು ಮೆಚ್ಚಾರ್ರ ಪೆನ್ಸಿಲ್ ಚಿತ್ರ ಬಿಡಿಸಿ ತಮ್ಮೊಳಗಿನ ಕಲಾವಿದನನ್ನು ಬೆಳಗಿಸಿ ರಾಷ್ಟ್ರ ಭಕ್ತಿ ಉಳಿಸಿ ಕೊಳ್ಳುತ್ತಾರೆಂಬುದು ನಿಶ್ವಯ. ಯುವಕರಿಗೆ ಇಂತಹಾ ಶಿಕ್ಷಣ ದೊರಕಲಿ” ಎ೦ದು ವೆಂಕ ಟೇಶ ಬಾಯಿರಿಯವರು ಕೋಡಿಕಲ್ನ ವಿಪ್ರ ವೇದಿಕೆಯ ಕಾವ್ಯ ವಾಚನ ಕಾರ್ಯಕ್ರಮದಲ್ಲಿಹೇಳಿದರು.

ಭವಾನಿ ಮನೆಯಲ್ಲಿ ಜರಗಿದ ಕಾವ್ಯವಾಚನ- ಪ್ರವಚನ ಕಾರ್ಯಕ್ರಮವನ್ನು ವರ್ಕಾಡಿ ರವಿ ಅಲೆವೂರಾಯ ಹಾಗೂ ಕರ್ಣಾಟಕ ಬ್ಯಾಂಕ್ ನ ನಿವೃತ್ತ ಪ್ರಬಂಧಕ ಸಂಪತ್ ಕುಮಾರ್ ಭಟ್ ನಡೆಸಿಕೊಟ್ಟರು.
ಕ್ಯಾ.ಸ್ಮಿತ್ ಮೆಚ್ಚಾರ್ ರ ಚಿತ್ರ ಬಿಡಿಸಿ ವಿಕ್ರಮ್ ಯಸ್, ಪ್ರಥಮ ;ಕು.ಅದ್ವಿಕಾ ಮಡಿ, ಕು.ಅಸ್ಮಿ, ಕು.ಅದ್ವಿ ದ್ವಿತೀಯ ಪ್ರಶಸ್ತಿಗಳನ್ನು ಪಡೆದುಕೊಂಡರು. ಮಾಧವ ಭಟ್, ಅವನೀಶ ಭಟ್ ಹಾಗೂ ವಿದ್ಯಾ ಗಣೇಶ ರಾವ್ ತೀರ್ಪುಗಾರರಾಗಿದ್ದರು. ಉಷಾ ಬಾಯಿರಿಯವರನ್ನು ಗೌರವಿಸಲಾಯಿತು. ಶ್ರೀವತ್ಸ ಭಟ್, ಮೈರ್ಪಾಡಿ ಬಹುಮಾನಗಳನ್ನು ವಿವರಿಸಿದರು. ರಾಮಚಂದ್ರ ಭಟ್, ಡಿ.ರಾಮಮೂತಿ೯, ಕಡೂರು ಪುರುಷೋತ್ತಮ ಭಟ್ ಮುಖ್ಯ ಅತಿಥಿಯಾಗಿದ್ದರು. ಪ್ರಕಾರ್ಯದರ್ಶಿ ದುರ್ಗಾದಾಸ್ ಕಟೀಲು ನಿರ್ವಹಿಸಿದರು. ಕಿಶೋರ್ ಕೃಷ್ಣ ವಂದನಾರ್ಪಣೆಗೈದರು.

