ದುಬೈ: ಕಟೀಲು ಫ್ರೆಂಡ್ಸ್ ಕ್ರಿಕೆಟ್ ಟೀಂ ದುಬೈ ವತಿಯಿಂದ ಆಯೋಜಿಸಲಾಗುತ್ತಿರುವ ಯುಎಇ ಕ್ರಿಕೆಟ್ ಪ್ರೀಮಿಯರ್ ಲೀಗ್ (CPL) 2026ರ 15ನೇ ಆವೃತ್ತಿಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಟೂರ್ನಿಯ ಜೆರ್ಸಿ ಅನಾವರಣ, ಟ್ರೋಫಿ ಬಿಡುಗಡೆ ಹಾಗೂ ಆಟಗಾರರ ಹರಾಜು ಪ್ರಕ್ರಿಯೆ ಕಾರ್ಯಕ್ರಮವು ಇತ್ತೀಚೆಗೆ ದುಬೈನ ಬಿ ಟೌನ್ ರೆಸ್ಟೋರೆಂಟ್ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ Longmarch ಕಂಪನಿಯ ಆಡಳಿತ ನಿರ್ದೇಶಕರಾದ ಪ್ರಣಯ್ ಮೆಹ್ತಾ, ಸುಶಿಲ್ ಗುಪ್ತಾ, ಸುಶಿಲ್ ಶರ್ಮಾ, Ranger General Transport ಸಂಸ್ಥೆಯ ಮಾಲೀಕ ಉದಯ ಶೆಟ್ಟಿ ಹಾಗೂ Barrels Group ಮಾಲೀಕ ಅಭಿ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಟೂರ್ನಿಯು ನವೆಂಬರ್ 29ರಂದು ಬೆಳಿಗ್ಗೆ 10 ಗಂಟೆಯಿಂದ ಯುಎಇಯ ಉಮ್ಮ್ ಅಲ್ ಕ್ವಿನ್ ಎ.ಕೆ.ಎಂ. ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಯುಎಇಯ ವಿವಿಧ ಭಾಗಗಳ ಕ್ರಿಕೆಟ್ ತಂಡಗಳು ಹಾಗೂ ಆಟಗಾರರು ಭಾಗವಹಿಸಲಿದ್ದು, ತುಳು-ಕನ್ನಡಿಗರ ಕ್ರೀಡಾ ಪ್ರತಿಭೆಗೆ ಉತ್ತಮ ವೇದಿಕೆಯಾಗಲಿದೆ.

ಯುಎಇಯಲ್ಲಿರುವ ತುಳು-ಕನ್ನಡ ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿ ಪಂದ್ಯಾಟವನ್ನು ವೀಕ್ಷಿಸುವ ಮೂಲಕ ಆಟಗಾರರನ್ನು ಪ್ರೋತ್ಸಾಹಿಸಬೇಕೆಂದು ಕಟೀಲು ಫ್ರೆಂಡ್ಸ್ ಕ್ರಿಕೆಟ್ ಟೀಂ ದುಬೈಯ ಸಂಘಟಕರು ಮನವಿ ಮಾಡಿದ್ದಾರೆ.

ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ದುಬೈ

