ಬೆಂಗಳೂರು, ನ.18: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಿರುವ ಕರ್ನಾಟಕ ಸರ್ಕಾರ, ಬೆಂಗಳೂರು ನಗರ ಪೊಲೀಸ್ ಸಂಪೂರ್ಣವಾಗಿ ಪುನರ್ರಚಿಸಿ 34 ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಇದರೊಂದಿಗೆ ಬೃಹತ್ ಬೆಂಗಳೂರು ಐದು ಪೊಲೀಸ್ ಕಮಿಷನರೇಟ್ಗಳಾಗಿ ವಿಭಜಿಸಿ ಆದೇಶ ಹೊರಡಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮಾದರಿಯಲ್ಲಿ ಪೊಲೀಸ್ ಆಡಳಿತವನ್ನು ವಿಕೇಂದ್ರೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ಗಳನ್ನು ರಚಿಸಲಾಗಿದೆ. ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ಎಡಿಜಿಪಿಯಾಗಿದ್ದ ಆರ್. ಹಿತೇಂದ್ರ ಅವರನ್ನು ನೂತನ ಬೆಂಗಳೂರು ನಗರ ಪೊಲೀಸ್ ಆಯುಕ್ತ ನೇಮಿಸಲಾಗಿದೆ. 1996ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಅವರು ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಂದ ಅಧಿಕಾರ ಹಸ್ತಾಂತರಿಸಿಕೊಂಡರು. ಸೀಮಂತ್ ಕುಮಾರ್ ಸಿಂಗ್ ಅವರಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳನ್ನು ಎಡಿಜಿಪಿಯಾಗಿ ಬದಲಾಯಿಸಲಾಗಿದೆ.
ಐದು ವಿಭಾಗಗಳಿಗೆ ಐವರು ಆಯುಕ್ತರು
ಹೊಸದಾಗಿ ರಚಿಸಲಾದ ಐದು ಪೊಲೀಸ್ ಕಮಿಷನರೇಟ್ಗಳಿಗೆ ನೇಮಕಗೊಂಡಿರುವ ಅಧಿಕಾರಿಗಳ ವಿವರ ಹೀಗಿದೆ:
- ಕೇಂದ್ರ ಬೆಂಗಳೂರು ನಗರ – ಲಾಭು ರಾಮ್
- ಪೂರ್ವ ಬೆಂಗಳೂರು ನಗರ – ಪಿ.ಎಸ್. ಹರ್ಷ
- ಪಶ್ಚಿಮ ಬೆಂಗಳೂರು ನಗರ – ವಿಕಾಶ್ ಕುಮಾರ್ ವಿಕಾಶ್
- ಉತ್ತರ ಬೆಂಗಳೂರು ನಗರ – ಎಂ.ಬಿ. ಬೋರಲಿಂಗಯ್ಯ
- ದಕ್ಷಿಣ ಬೆಂಗಳೂರು ನಗರ – ಸಿ. ವಂಶಿ ಕೃಷ್ಣ
ಹುದ್ದೆಗಾಗಿ ಕಾಯುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಎಂ. ನಿಂಬಾಳ್ಕರ್ ಅವರನ್ನು ಬೆಂಗಳೂರು ನಗರ ಸಂಚಾರ ಪೊಲೀಸ್ ಆಯುಕ್ತ ನೇಮಿಸಲಾಗಿದೆ. ಇದರೊಂದಿಗೆ ನವೀಕರಿಸಲಾದ ರೌಡಿ ನಿಗ್ರಹ ದಳದ ಆಯುಕ್ತರ ಹೆಚ್ಚುವರಿ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ. ಮುಖ್ಯ ಪೊಲೀಸ್ ಆಯುಕ್ತರ ಮೇಲ್ವಿಚಾರಣೆಯಲ್ಲಿ ಅಪರಾಧ ನಿಯಂತ್ರಣ ಚಟುವಟಿಕೆಗಳನ್ನು ಅವರು ನಿರ್ವಹಿಸಲಿದ್ದಾರೆ.
ಹಿರಿಯ ಅಧಿಕಾರಿಗಳಿಗೆ ಹೊಸ ಜವಾಬ್ದಾರಿ
ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ಎಡಿಜಿಪಿಯಾಗಿ ಆರ್. ಹಿತೇಂದ್ರ ಅವರ ಸ್ಥಾನಕ್ಕೆ ಬಿಜಯ್ ಕುಮಾರ್ ಸಿಂಗ್ ಅವರನ್ನು ನೇಮಿಸಲಾಗಿದೆ. ಎಸ್.ಮುರುಗನ್ ಅವರಿಗೆ ಲೋಕಾಯುಕ್ತ ಎಡಿಜಿಪಿ ಹುದ್ದೆ ಹಾಗೂ ಮನೀಶ್ ಖರ್ಬಿಕರ್ ಅವರಿಗೆ ಬೆಂಗಳೂರು ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ವಿಭಾಗ ಎಡಿಜಿಪಿ ಜವಾಬ್ದಾರಿ ನೀಡಲಾಗಿದೆ.
ಎನ್. ಶಶಿ ಕುಮಾರ್ ಅವರನ್ನು ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ವರ್ಗಾಯಿಸಲಾಗಿದೆ. ಅನುಪಮ್ ಅಗರ್ವಾಲ್ ಅವರಿಗೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಐಜಿಪಿ ಹೊಣೆ ವಹಿಸಲಾಗಿದೆ.
ಇತರ ಪ್ರಮುಖ ನೇಮಕಾತಿಗಳಲ್ಲಿ ಶರಣಪ್ಪ ಎಸ್.ಡಿ. ಅವರಿಗೆ ಡಿಐಜಿ, ಕುಲದೀಪ್ ಕುಮಾರ್ ಆರ್. ಜೈನ್ ಅವರಿಗೆ ಕಲಬುರಗಿ ನಗರ ಡಿಐಜಿ ಹಾಗೂ ಪೊಲೀಸ್ ಆಯುಕ್ತ, ಎಂ. ಪುಟ್ಟಮಾದಯ್ಯ ಅವರಿಗೆ ಮೈಸೂರು ದಕ್ಷಿಣ ವಲಯ ಡಿಐಜಿ ಮತ್ತು ಎಂ. ಅಶ್ವಿನಿ ಅವರಿಗೆ ಬೆಂಗಳೂರು ನೇಮಕಾತಿ ವಿಭಾಗದ ಡಿಐಜಿ ಹುದ್ದೆ ನೀಡಿದ್ದಾರೆ. ಜೆ.ಕೆ. ರಶ್ಮಿ ಅವರನ್ನು ಜಲಸಂಪನ್ಮೂಲ ಇಲಾಖೆ ವಿಜಿಲೆನ್ಸ್ ಡಿಐಜಿಯಾಗಿ ವರ್ಗಾಯಿಸಲಾಗಿದೆ.
ಡಿಸಿಪಿ ಮತ್ತು ಎಸ್ಪಿ ಹಂತದಲ್ಲೂ ಬದಲಾವಣೆ
ಬೆಂಗಳೂರು ನಗರದ ಪೊಲೀಸ್ ಆಡಳಿತವನ್ನು ಹೊಸ ವ್ಯವಸ್ಥೆಗೆ ಹೊಂದಿಸುವ ಹಲವು ಡಿಸಿಪಿ ಮತ್ತು ಎಸ್ಪಿ ಹುದ್ದೆಗಳಲ್ಲಿಯೂ ವರ್ಗಾವಣೆ ಮಾಡಲಾಗಿದೆ.
ಅನೂಪ್ ಎ. ಶೆಟ್ಟಿ ಅವರ ಪೂರ್ವ ಬೆಂಗಳೂರು ನಗರ ಸಂಚಾರ ಡಿಸಿಪಿಯಾಗಿ, ಲಕ್ಷ್ಮಣ್ ನಿಂಬರಗಿ ಅವರನ್ನು ಕೇಂದ್ರ ಬೆಂಗಳೂರು ಸಿಇಆರ್ (ಕೇಂದ್ರ ಕಚೇರಿ) ಡಿಸಿಪಿಯಾಗಿ, ಚನ್ನಬಸವಣ್ಣ ಲಂಗೋಟಿ ಅವರಿಗೆ ಇಂದಿರಾನಗರ ಡಿಸಿಪಿಯಾಗಿ ಹಾಗೂ ನಾಗೇಶ್ ಡಿ.ಎಲ್. ಅವರನ್ನು ಯಶವಂತಪುರ ಡಿಸಿಪಿಯಾಗಿ ನೇಮಿಸಲಾಗಿದೆ.
ಲೋಕೇಶ್ ಭರಮಪ್ಪ ಜಗಲಸಾರ ಅವರಿಗೆ ಕೇಂದ್ರ ಬೆಂಗಳೂರು ಸಂಚಾರ ಡಿಸಿಪಿ ಜವಾಬ್ದಾರಿ ನೀಡಿದೆ. ಯತೀಶ್ ಎನ್. ಅವರನ್ನು ಪಶ್ಚಿಮ ಬೆಂಗಳೂರು ನಗರದ ಕೆಂಗೇರಿ (ನೈಋತ್ಯ) ಡಿಸಿಪಿಯಾಗಿ ನೇಮಿಸಲಾಗಿದೆ.
ಸೈದುಲು ಅಡಾವತ್ ಅವರ ಆಂತರಿಕ ಭದ್ರತಾ ವಿಭಾಗ (ಐಎಸ್ಡಿ) ಎಸ್ಪಿಯಾಗಿ ಬದಲಾಯಿಸಲಾಗಿದೆ. ಶ್ರೀಹರಿ ಬಾಬು ಬಿ.ಎಲ್. ಅವರನ್ನು ವೈಟ್ಫೀಲ್ಡ್ ಡಿಸಿಪಿಯಾಗಿ, ಗೀತಾ ಎಂ.ಎಸ್. ಅವರನ್ನು ಪೂರ್ವ ಬೆಂಗಳೂರು ನಗರದ ಡಿಸಿಪಿಯಾಗಿ ನೇಮಿಸಲಾಗಿದೆ.
ರಂಜಿತ್ ಕುಮಾರ್ ಬಂಡಾರು ಅವರಿಗೆ ಬೆಂಗಳೂರು ನಗರ ಡಿಸಿಪಿ (ಆಡಳಿತ) ಹೊಣೆ ನೀಡಲಾಗಿದೆ. ಅಶೋಕ್ ಕೆ.ವಿ. ಅವರನ್ನು ಪೀಣ್ಯ ಡಿಸಿಪಿಯಾಗಿ, ವಿಕ್ರಮ್ ಅಮಠ ಅವರ ಉತ್ತರ ಬೆಂಗಳೂರು ನಗರದ ಡಿಸಿಪಿಯಾಗಿ, ಲಕ್ಷ್ಮಿ ಗಣೇಶ್ ಕೆ. ಅವರನ್ನು ಗಾಂಧಿನಗರ ಡಿಸಿಪಿಯಾಗಿ ಹಾಗೂ ಪಿ.ವಿ. ಸ್ನೇಹ ಅವರನ್ನು ಪಶ್ಚಿಮ ಬೆಂಗಳೂರು ನಗರ ಸಂಚಾರ ಡಿಸಿಪಿಯಾಗಿ ನೇಮಿಸಲಾಗಿದೆ.
ನಿರ್ಗಮಿತ ಆಯುಕ್ತರ ಸೇವೆಗೆ ಕೃತಜ್ಞತೆ
ಅಧಿಕಾರ ಹಸ್ತಾಂತರದ ಬಳಿಕ ಮಾತನಾಡಿದ ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸುಮಾರು ಒಂದೂವರೆ ವರ್ಷ ಸೇವೆ ಸಲ್ಲಿಸಿದ ಅನುಭವ ಹಂಚಿಕೊಂಡರು. ತಮ್ಮ ಅಧಿಕಾರಾವಧಿಯಲ್ಲಿ ಮಾದಕ ವಸ್ತುಗಳ ಹಾವಳಿಯನ್ನು ನಿಯಂತ್ರಿಸಿ ಬೆಂಗಳೂರನ್ನು ಡ್ರಗ್ಸ್ ಮುಕ್ತ ನಗರವನ್ನಾಗಿಸಲು ಪ್ರಯತ್ನಿಸಿದಾಗ. ಈ ಕಾರ್ಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನೀಡಿದ ಸಹಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.
ಅವಿಭಜಿತ ಬೆಂಗಳೂರು ನಗರದ ಕೊನೆಯ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿರುವುದು ಹೆಮ್ಮೆಯ ವಿಚಾರ ಎಂದ ಅವರು, ಹೊಸ ಪೊಲೀಸ್ ಕಮಿಷನರೇಟ್ ವ್ಯವಸ್ಥೆಯಡಿ ಪೊಲೀಸರು ಮತ್ತಷ್ಟು ಪರಿಣಾಮಕಾರಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು
ಬೆಂಗಳೂರು ನಗರದ ಪೊಲೀಸ್ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಈ ಮಹತ್ವದ ಪುನರ್ರಚನೆಯು ಆಡಳಿತಾತ್ಮಕ ವಿಕೇಂದ್ರೀಕರಣ, ಕಾನೂನು ಸುವ್ಯವಸ್ಥೆ ನಿರ್ವಹಣೆ ಹಾಗೂ ಅಪರಾಧ ನಿಯಂತ್ರಣಕ್ಕೆ ಹೊಸ ರೂಪ ನೀಡುವ ನಿರೀಕ್ಷೆ ಮೂಡಿಸಿದೆ.

