ಧಾರವಾಡ : ಭಾರತೀಯ ಕಂದಾಯ ಸೇವೆ (ಐಆರ್ಎಸ್) ನಿವೃತ್ತ ಅಧಿಕಾರಿ ಎಂ. ಪಂಚಪ್ಪ ಅವರ ಜನ್ಮ ಶತಮಾನೋತ್ಸವ, ಸಿದ್ಧರಾಮೇಶ್ವರ ಮಾರ್ಗದರ್ಶಿ ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಡಾ. ಸರೋಜಿನಿ ಶಿಂತ್ರಿ ಪುತ್ಥಳಿ ಅನಾವರಣದ ಸಂಯುಕ್ತ ಸಮಾರಂಭ ರವಿವಾರ(ನ.22) ಮುಂಜಾನೆ 10.30 ಗಂಟೆಗೆ ಇಲ್ಲಿಯ ಕಲ್ಯಾಣನಗರದ ಸಿದ್ಧರಾಮೇಶ್ವರ ಬಿ.ಇಡಿ. ಕಾಲೇಜಿನಲ್ಲಿ ನಡೆಯಲಿದೆ.

ಗದಗ ತೋಂಟದಾರ್ಯಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮತ್ತು ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಜರುಗುವ ಈ ಸಮಾರಂಭವನ್ನು ಕಾರ್ಮಿಕ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಲೋಕೋಪಯೋಗಿ ಇಲಾಖೆಯ ವಿಶ್ರಾಂತ ಮುಖ್ಯ ಇಂಜನೀಯರ್ ಡಾ.ಜಿ.ಸಿ.ತಲ್ಲೂರ ಹಾಗೂ ಬೆಳಗಾವಿಯ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷೆ ಡಾ. ಕಮಲಾ ಬಾಳೆಕುಂದ್ರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಬೆಂಗಳೂರಿನ ಕೆಐಎಡಿಬಿ ಸಿಇಓ ಗೋವಿಂದರೆಡ್ಡಿ, ಚಿಂತಕ ಶಶಿಧರ ತೋಡಕರ, ವಿಜಯ ಪಂಚಪ್ಪ, ಕುಮಾರ ಪಂಚಪ್ಪ, ಡಾ.ಪಾರ್ವತಿ, ಡಾ. ದಿಲೀಪ ಜವಳಿ ಪಾಲ್ಗೊಳ್ಳಲಿದ್ದು, ಸಮಸ್ತ ಹಳೆಯ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಸಂಸ್ಥೆಯ ಕಾರ್ಯದರ್ಶಿ ಕುಮಾರ ಹಿರೇಮಠ ಹಾಗೂ ಮುಖ್ಯಾಧ್ಯಾಪಕ ನಾಗಯ್ಯ ಹಿರೇಮಠ ಜಂಟಿ ಪ್ರಕಟಣೆಯಲ್ಲಿ ಕೋರಿದ್ದಾರೆ.

