ಸಾಹಿತ್ಯ ಸಂಸ್ಕೃತಿ ಕಲೆ ಸಂಘಟನೆ ಸದ್ವಿಚಾರ ಎಂಬ ನೆಲೆಯಲ್ಲಿ ಕಳೆದ 25 ವರ್ಷಗಳಿಂದ ಪುಸ್ತಕ ಪ್ರಕಟನೆಯಲ್ಲಿ ಸಕ್ರಿಯವಾಗಿರುವ ಕಲ್ಲಚ್ಚು ಪ್ರಕಾಶನದ ಬೆಳ್ಳಿ ಹಬ್ಬ ಜನವರಿ 5ರ “ರಜತ ರಂಗು” ಸಮಾರಂಭದಲ್ಲಿ ಸಾಹಿತ್ಯ ಮತ್ತು ಪೂರಕ ಕ್ಷೇತ್ರದ ರಾಜ್ಯ ಮತ್ತು ಹೊರರಾಜ್ಯದ ಈ ಕೆಳಗಿನ 25 ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ. ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಮಡಿಕೇರಿ, ಡಾ. ಪ್ರಸನ್ನ ಕೆ. ಸಂತೇಕಡೂರು ಮೈಸೂರು , ಡಾ. ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು, ವಿಕ್ರಂ ಕಾಂತಿಕೆರೆ ಮಂಗಳೂರು, ರಾಘವೇಂದ್ರ ಅಗ್ನಿಹೋತ್ರಿ ಮಂಗಳೂರು, ಸಂಪತ್ ಸಿರಿಮನೆ ಶೃಂಗೇರಿ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮಂಗಳೂರು, ಹಂಝ ಮಲಾರ್ ಮಂಗಳೂರು, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ರಾಘವೇಂದ್ರ ಬಿ. ರಾವ್ – ಅನು ಬೆಳ್ಳೆ ಕಾರ್ಕಳ, ಮಹಮ್ಮದ್ ಅಶೀರುದ್ದೀನ್ ಸಾರ್ತಬೈಲು ಮಂಗಳೂರು, ನಾರಾಯಣ ಕುಂಬ್ರ ಪುತ್ತೂರು, ಮಧುರಾ ಕರ್ಣಮ್ ಬೆಂಗಳೂರು ( ಎಲ್ಲರೂ ಸಾಹಿತ್ಯ ಕ್ಷೇತ್ರ) ಡಾ. ಮೋನಾ ಮೆಂಡೋನ್ಸಾ ಮಂಗಳೂರು, ಪುಷ್ಪಲತಾ ಪ್ರಭು ಕೊಂಚಾಡಿ ಮಂಗಳೂರು ( ಬಹುಮುಖ ಪ್ರತಿಭೆ) ಪಯ್ಯನ್ನೂರು ರಮೇಶ್ ಪೈ ಕೇರಳ, ಬಿ. ಎನ್. ವಾಸರೆ ದಾಂಡೇಲಿ, ( ಸಾಹಿತ್ಯ ಸಂಘಟನೆ) ಸುಶೀಲನ್ ಮೋಡಿಯಿಲ್ ಉಡುಪಿ, ಜಗದೀಶ ಭಂಡಾರಿ ಮಂಗಳೂರು, ವಿಭಾ ಶ್ರೀನಿವಾಸ್ ನಾಯಕ್ ಮಂಗಳೂರು ( ಸಂಗೀತ ಕ್ಷೇತ್ರ) ಶ್ವೇತಾ ಅರೆಹೊಳೆ ( ನೃತ್ಯ) , ಕೆ. ಲಕ್ಷ್ಮೀನಾರಾಯಣ ಮಂಗಳೂರು ( ಕಲೆ) ಕ್ರಿಸ್ಟೋಫರ್ ಜೋನ್ ಡಿಸೋಜ ಮಂಗಳೂರು (ನಾಟಕ) ಪ್ರಕಾಶ ಇಳಂತಿಲ ಮಂಗಳೂರು ( ಮಾಧ್ಯಮ) ವಿದ್ಯಾ ಯು. ಇಡ್ಕಿದು ಮಂಗಳೂರು ( ಪ್ರಕಾಶನ). ಇದೆ ಸಂದರ್ಭದಲ್ಲಿ ಕಲ್ಲಚ್ಚು ಪ್ರಕಾಶನದ ಕಳೆದ 15 ಆವೃತ್ತಿಯ ಕಲ್ಲಚ್ಚು ಪ್ರಶಸ್ತಿ ಪುರಸ್ಕೃತರಿಗೆ ಮತ್ತು ಲೇಖಕ ಬಳಗದ ಎಲ್ಲರಿಗೂ ಸಹ ಅಭಿನಂದನೆಗಳನ್ನು ಆತಿಥಿಗಳ ಸಮ್ಮುಖದಲ್ಲಿ ಆಯೋಜಿಸಿಲಾಗಿದೆಯೆಂದು ಪ್ರಕಾಶನದ ವ್ಯವಸ್ಥಾಪಕ ಮುಖ್ಯಸ್ಥ ಸಾಹಿತಿ ಮಹೇಶ ಆರ್. ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Related Posts
© 2025 Mangalore Mitra. Designed by Blueline Computers.