ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣ ಎನ್ನುವುದು ಮ್ಯಾಜಿಕ್ ಸ್ಟಿಕ್ ಇದ್ದ ಹಾಗೆ. ಸಾಮಾಜಿಕ ಜಾಲತಾಣ ಎಂತವರನ್ನೂ ಕೂಡ ರಾತ್ರಿ ಬೆಳಗಾಗುವಷ್ಟರಲ್ಲಿ ಜೀರೋದಿಂದ ಹೀರೋ ಮಾಡುತ್ತದೆ. ಇದೀಗ ಅದೇ ಸಾಲಿಗೆ ಮಹಾಕುಂಭ ಮೇಳದ ಸುಂದರ ಕಣ್ಣಿನ ಹುಡುಗಿ ಮೊನಾಲಿಸಾ ಕೂಡ ಸೇರಿದ್ದಾಳೆ.

ಮಹಾ ಕುಂಭಮೇಳದಲ್ಲಿ ಮಾಲೆ ಮಾರಲು ಇಂದೋರಿನಿಂದ ಬಂದಿರುವ 16 ವರ್ಷದ ಮೊನಾಲಿಸಾ ಭೋಂಸ್ಲೆ ತನ್ನ ಸೌಂದರ್ಯದಿಂದ ಲಕ್ಷಾಂತರ ಜನರನ್ನು ಆಕರ್ಷಿಸಿದ್ದಾಳೆ.ಅಲ್ಲದೆ ಈ ಅದ್ದೂರಿ ಕಾರ್ಯಕ್ರಮದ ಅನಿರೀಕ್ಷಿತ ತಾರೆಯಾಗಿದ್ದಾಳೆ

ಭಾರತದ ಮೊನಾಲಿಸಾ ಎಂದೇ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆದ ಈ ಕ್ರಷ್ಣಸುಂದರಿಗೆ ಇದೀಗ ಬಾಲಿವುಡ್ ನಿಂದ ಆಫರ್ ಬಂದಿದೆ. ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಮೊನಾಲಿಸಳಿಗೆ ತಮ್ಮ ಮುಂದಿನ ಚಲನಚಿತ್ರ “ಡೈರಿ ಆಫ್ ಮಣಿಪುರ್ ” ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.ಇದಕ್ಕಾಗಿ ಲುಕ್ ಟೆಸ್ಟ್ ಸಹ ನಡೆಸಲಾಗಿದೆ. ಅಲ್ಲದೆ ನಟನಾ ತರಬೇತಿಯನ್ನು ಕೂಡ ಕೊಡಿಸಲಾಗುತ್ತಿದೆ.ವೈರಲ್ ಯುವತಿಗೆ ಮೇಕೋವರ್ ಮಾಡಲಾಗಿದ್ದು ಮೇಕೋವರ್ ವಿಡಿಯೋ ಇದೀಗ ವೈರಲ್ ಆಗಿದೆ.

