ಮಂಗಳೂರು: ಎಂ.ಆರ್.ಪಿ.ಎಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜೈಪುರ್ ಪೂಟ್ಸ್ ಸಹಕಾರದಲ್ಲಿ ಎಂಡೋಸಲ್ಪಾನ್ ನಿಂದ ಬಲಳುತ್ತಿರುವವರಿಗೆ ಕೃತಕ ಕಾಲು ಜೊಡಣಾ ಶಿಬಿರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಮತ್ತಿತರ ಕಡೆಗಳಲ್ಲಿ ನಡೆಯಿತು. ಸುಮಾರು ೧೩ ಲಕ್ಷ ರೂಪಾಯಿ ವೆಚ್ಚದಲ್ಲಿ, ಸುಮಾರು ೭೭ ಫಲಾನುಭವಿಗಳಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದ್ದು, ವಿಶೇಷವೆಂದರೆ ಫಲಾನುಭವಿಗಳ ಕಾಲಿನ ಅಳತೆ ಪಡೆದು ಅವರ ಕಾಲಿಗೆ ಹೊಂದುವಂತಹ ಕೃತಕ ಕಾಲನ್ನು ಸ್ಥಳದಲ್ಲೇ ತಯಾರಿಸಿ ವಿತರಿಸಲಾಗಿದ್ದು ವಿಶೇಷವಾಗಿತ್ತು, ನಿರಂತರ ಮೂರು ದಿನಗಳ ಕಾಲ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಸ್ಥಳೀಯ ಸರಕಾರಿ ಅಸ್ಪತ್ರೆಯಲ್ಲಿ ಈ ಶಿಬಿರ ಆಯೋಜಿಸಲಾಗಿದ್ದು, ಅಲ್ಲದೆ ಫಲಾನುಭವಿಗಳಿಗೆ ಪೂಶಕಾಂಶಯುಕ್ತ ಆಹಾರ ಕಿಟ್ ನೀಡಲಾಯಿತು. ಎಂಡೋಸಲ್ಪಾನ್ ನಿಂದ ಬಲಳುತ್ತಿರುವ ನೂರಾರು ಮಂದಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ನಿರಂತರ ಸಹಕಾರ ನೀಡುತ್ತಿದ್ದು, ಎಂಡೋಸಲ್ಪಾನ್ ಪೀಡಿತರಾಗಿದ್ದು ಮಲಗಿದಲ್ಲೇ ಇದ್ದ ನೂರಾರು ಮಂದಿಗೆ ದಿನಬಳಕೆಯ ಕಿಟ್ ನ್ನು ಕೂಡ ಈ ಹಿಂದೆ ನೀಡಲಾಗಿದ್ದು ಸಂಸ್ಥೆಯ ಸಮಾಜ ಸೇವಾ ಚಟುವಟಿಕೆಗಳಿ ಫಲಾನುಭವಿಗಳು ಮೆಚ್ಚುಗೆ ಸೂಚಿಸಿದರು. ಫಲಾನುಭವಿ ರಕ್ಷಕರಾದ ಸವಿತಾ ಶೆಟ್ಟಿ ಅರಂಬೋಡಿ ಮಾದ್ಯಮ ಜೊತೆ ಮಾತನಾಡಿ, ಎಂ.ಆರ್.ಪಿ.ಎಲ್ ಸಂಸ್ಥೆ ಒಂದು ಅತ್ಯುತ್ತಮವಾದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ, ಈ ಹಿಂದೆಯೂ ಸಂಸ್ಥೆ ನಮಗೆ ಹಲವು ಬಾರಿ ಸಹಾಯ ನೀಡಿದೆ, ಎಂ.ಆರ್.ಪಿ.ಎಲ್ ನ ಸಮಾಜಮುಖಿ ಕಾರ್ಯಗಳಿಗೆ ಅಬಾರಿಯಾಗಿದ್ದೇವೆ ಎಂದರು. ಪುತ್ತೂರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್. ಆರ್ ತಿಮ್ಮಯ್ಯ ಮಾತನಾಡಿ ಎಂ.ಆರ್ ಪಿ.ಎಲ್ ಕಳೆದ ಹಲವು ವರ್ಷಗಳಿಂದ ಎಡೋಸಲ್ಪಾನ್ ಪೀಡಿತರಿಗೆ ಸಹಕಾರ ನೀಡುತ್ತಿದ್ದು, ಇದೀಗ ಫಲಾನುಭವಿಗಳಿಗೆ ಉಚಿತ ಕೃತಕ ಕಾಲು ವಿತರಣಾ ಶಿಬಿರ ಆಯೋಜಿಸಿ ಮತ್ತೆ ಗಮನ ಸೆಳೆದಿದೆ, ಅಲ್ಲದೆ ಫಲಾನುಭವಿಗಳಿಗೆ ಪೌಷ್ಠಿಕಾಂಶದ ಕಿಟ್ ದಿನಬಳಕೆಯ ಕಿಟ್ ಹೀಗೆ ನೀಡುವ ಮೂಲಕ ಅನೇಕ ಬಾರಿ ಸಹಕಾರ ನೀಡಿದೆ, ಸಂಸ್ಥೆ ತನ್ನ ಸಿ.ಎಸ್.ಆರ್ ಅನುದಾನದದಿಂದ ನಡೇಸುವ ನಿರಂತರ ಸಮಾಜಮುಖಿ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಈ ಸಂದರ್ಭ ತಾಲೂಕು ಆರೋಗ್ಯ ಅಧಿಕಾರಿ ಡಾ ದೀಪಕ್ ರೈ, ಡಾ ಸಂಜಾತ್, ಎಂಡೋಸಲ್ಪಾನ್ ಜಿಲ್ಲಾ ಸಂಯೋಜಕ ಸಾಜುದೀನ್, ಎಂ.ಆರ್.ಪಿ.ಎಲ್ ಮಾನವ ಸಂಪನ್ಮೂಲ ಅಧಿಕಾರಿ ಸ್ಟೀವನ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.
MRPL ವತಿಯಿಂದ ಎಂಡೋಸಲ್ಪಾನ್ ಫಲಾನುಭವಿಗಳಿಗೆ ಕ್ರತಕ ಕಾಲು ಜೋಡನಾ ಶಿಬಿರ.
Related Posts
© 2025 Mangalore Mitra. Designed by Blueline Computers.