ಮಂಗಳೂರು, ಡಿ.27: ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಕರ್ನಾಟಕ ರಾಜ್ಯ ಶಾಖೆಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾಕ್ಟರ್ ಶಿವಶರಣ ಶೆಟ್ಟಿ ಇವರನ್ನು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ದಕ್ಷಿಣ ಕನ್ನಡ ಶಾಖೆ ಇದರ ವತಿಯಿಂದ ಮಂಗಳೂರಿನಲ್ಲಿ ಡಿ. 26ರಂದು ಸಮ್ಮಾನಿಸಲಾಯಿತು.
ಈ ಸಂದರ್ಭ ಇಂಡಿಯನ್ ಡೆಂಟಲ್ ಅಸೋಸಿಯೇಶನ್ ದಕ್ಷಿಣ ಕನ್ನಡ ಶಾಖೆ ಸಭೆ ಯಲ್ಲಿ ನೂತನ ದ.ಕ ಜಿಲ್ಲಾ ಅಧ್ಯಕ್ಷರಾಗಿ ಡಾ.ನಿಲನ್ ಶೆಟ್ಟಿ ಹಾಗೂ ನೂತನ ಕಾರ್ಯದರ್ಶಿ ಡಾ.ಹೇಮಂತ್ ಜೋಗಿ ಹಾಗೂ ಕೋಶಾಧಿಕಾರಿ ಡಾ.ಪ್ರಸನ್ನ ಕುಮಾರ್ ರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಸದಸ್ಯರು ಉಪಸ್ಥಿತರಿದ್ದರು.