ಹಿಂದು ಜಾಗರಣ ವೇದಿಕೆ ಶಕ್ತಿನಗರ
ಮೂರನೇ ವರ್ಷದ ಶ್ರೀ ಪೊಳಲಿ ಅಮ್ಮಾನಡೆಗೆ ನಮ್ಮ ನಡೆ* ಪಾದಯಾತ್ರೆಯು ಇದೆ ಬರುವ 29-12-2024 ಅದಿತ್ಯವಾರ ಮುಂಜಾನೆ 05:00 ಗಂಟೆಗೆ ಹೊರಡಲಿದೆ. ಈ ಸಂದರ್ಭದಲ್ಲಿ ಪಾದಯಾತ್ರೆ ಮಾಡುವ ಎಲ್ಲಾ ಪೊಳಲಿ ಶ್ರೀ ರಾಜ ರಾಜೇಶ್ವರಿ ಅಮ್ಮನ ಭಕ್ತರು 4.45 ಕ್ಕೆ ಸರಿಯಾಗಿ ವೈದ್ಯನಾಥ ದೈವಸ್ಥಾನ ಕೊಡಂಗೆಯಲ್ಲಿ ಸೆರಬೇಕಾಗಿ ವಿನಂತಿ. ಬೆಳಗ್ಗಿನ ಉಪಹಾರದ ವ್ಯವಸ್ಥೆ ಇದ್ದು ಉಪಹಾರ ಸೇವಿಸಿ ಸರಿಯಾಗಿ 05:00 ಗಂಟೆಗೆ ಪಾದಯಾತ್ರೆ ಹೊರಡಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲ ಪೊಳಲಿ ಅಮ್ಮನ ಭಕ್ತರು ಕೇಸರಿ ಶಾಲು ಧರಿಸಿ ಬರಬೇಕಾಗಿ ವಿನಂತಿ. ಸೇರಿರುವಂತ ಸಮಸ್ತ ಅಮ್ಮನ ಭಕ್ತರು ಒಟ್ಟಾಗಿ ಶಿಸ್ತಿನಿಂದ ರಸ್ತೆಯ ಬದಿಯಿಂದ ಪಾದಯಾತ್ರೆ ಮಾಡತಕ್ಕದ್ದು. ತದನಂತರ ದೇವಸ್ಥಾನಕ್ಕೆ ತಲುಪಿದ ಮೇಲೆ ಜಾಗರಣ ವೇದಿಕೆ ಶಕ್ತಿನಗರ ವತಿಯಿಂದ ಅಮ್ಮನಿಗೆ ವಿಶೇಷ ಪೂಜೆ ನಡೆಯಲಿದೆ. ನಂತರ ಅಲ್ಲಿಂದ ಉಪಹಾರ ಸೇವಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರೆಲಾರಿಗೂ ಹಿಂತಿರುಗಲು ಬಸ್ಸಿನ ವ್ಯವಸ್ಥೆ ಇದ್ದು ಅದೇ ಬಸ್ಸಿನಲ್ಲಿ ಬರಬೇಕಾಗಿ ವಿನಂತಿ.