ಮಂಗಳೂರು. ಹವ್ಯಾಸಿ ಬಳಗ ಕದ್ರಿ ಇದರ 30ನೇ ವರ್ಷಾಚರಣೆಯ ಅಂಗವಾಗಿ ತ್ರಿಂಶತಿ ಸಂಭ್ರಮವನ್ನು 5-1-2025ರ ಭಾನುವಾರ ಸಂಜೆ 4 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಅಯೋಜಿಸಲಾಗಿದೆ ಎಂದು ಡಾ.ವಸಂತ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಂದು ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ” ಶರಣಸುತ ತರಣಿಸೇನ “ಎಂಬ ತಾಳಮದ್ದಳೆ ಪ್ರಸಂಗ ಕಾರ್ಯಕ್ರಮ ನಡೆಯಲಿದೆ. ಸಾಯಂಕಾಲ 6 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅಗಲಿದ ಹಿರಿಯ ಕಲಾವಿದ ಯಂ.ಯಂ.ಸಿ ರೈಯವರಿಗೆ ನುಡಿನಮನದೊಂದಿಗೆ ಕೀರ್ತಿಶೇಷ ಕಲಾವಿದರಾದ ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರು,ಕುಂಬ್ಳೆ ಸುಂದರರಾವ್,ಪುತ್ತೂರು ಶ್ರೀಧರ ಭಂಡಾರಿ ,ದೇವಕಾನ ಕ್ರಷ್ಣ ಭಟ್, ಬಿ.ನಾಗೇಶ್ ಪ್ರಭು,ಡಿ ಕ್ರಷ್ಣಪ್ಪ ಕರ್ಕೇರ ಉರ್ವಾಸ್ಟೋರ್ ಇವರ ಸಂಸ್ಕರಣೆ ನಡೆಯಲಿದೆ.
ಯಕ್ಷಗಾನ ಇತಿಹಾಸದಲ್ಲಿ ಪ್ರಥಮಬಾರಿಗೆ ಕೀರ್ತಿಶೇಷ ಕಲಾವಿದರ ಧರ್ಮಪತ್ನಿಯವರಾದ ಚಂದ್ರವತಿ ನಾರಾಯಣ ಶೆಟ್ಟಿ, ಹೇಮಲತಾ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಜಯಂತಿ ಕುಂಬ್ಳೆ ಚಂದ್ರಶೇಖರ, ಗಿರಿಜಾವತಿ ಸಂಪಾಜೆ ಶೀನಪ್ಪ ರೈ,ವಾರಿಜಾ ಉದ್ಯಾವರ ಜಯಕುಮಾರ್,ಇವರಿಗೆ ” ಯಕ್ಷ ಸುವಾಸಿನಿ ಪುರಸ್ಕಾರ ” ಹಿರಿಯ ವಿಶ್ರಾಂತ ಕಲಾವಿದರಾದ ಕೋಡಿ ಕುಷ್ಟ ಗಾಣಿಗರಿಗೆ ” ಯಕ್ಷ ಕೌಷಿಕೆ ಪ್ರಶಸ್ತಿ ” ಕಟೀಲು ರಮಾನಂದ ರಾವ್ ಅವರಿಗೆ “ಯಕ್ಷ ತುಂಬುರ ಪ್ರಶಸ್ತಿ” ಕೊಕ್ಕಡ ಈಶ್ವರ ಭಟ್ ರವರಿಗೆ “ಯಕ್ಷ ಸೌಗಂಧಿಕೆ ಪ್ರಶಸ್ತಿ ” ಯೊಂದಿಗೆ ಯಕ್ಷ ಸಾಧಕರಾದ ಮುರಳಿ ಕಡೆಕಾರ್, ನಿಡ್ಲೆ ಗೋವಿಂದ ಭಟ್, ಉಜಿರೆ ಅಶೋಕ ಭಟ್, ಸಂಜಯ ಕುಮಾರ್ ರಾವ್,ಪಲಿಮಾರು ಚೇವಾರು ಶಂಕರ ಕಾಮತ್ ಇವರಿಗೆ ” ಯಕ್ಷ ಸಂಮಾನ” ದೊಂದಿಗೆ ರಾಜರತ್ನಂ ದೇವಾಡಿಗ ಪುತ್ತೂರು,ಪೊಳಲಿ ವೆಂಕಟೇಶ ನಾವಡ,ವಿದ್ಯಾಧರ ಶೆಟ್ಟಿ ಪೊಸಕುರಲ್,ಪುತ್ತೂರು ರಮೇಶ್ ಭಟ್,ಪೊಳಲಿ ಗಣೇಶ್ ಕಾರಂತ,ನಾರಾಯಣ ಕಂಜರ್ಪಣೆ,ಗಣಪತಿ ಕಾಮತ್ ಪಡುಬಿದ್ರೆ,ಕ್ರಷ್ಣಪ್ರಕಾಶ ಉಳಿತ್ತಾಯ,ರಮೇಶ್ ಕುಲಶೇಖರ ,ನಾಗೇಶ್ ಆಚಾರ್ಯ ಕುಲಶೇಖರ, ನೀರ್ಮಜೆ ಕ್ರಷ್ಣಮೂರ್ತಿ,ಸುರೇಂದ್ರ ಮಲ್ಲಿ ಗುರುಪುರ, ನಿಡುವಜೆ ಪುರುಷೋತ್ತಮ ಭಟ್,ಭಾಸ್ಕರ ಮಲ್ಲ,ಉದ್ಯಾವರ ಪದ್ಮನಾಭ ಮಾಸ್ಟರ್, ಗಣೇಶ್ ಕುಂಜತ್ತೂರು,ಸುದರ್ಶನ ದಂಬೆಲ್,ಭವಾನಿ ಶಂಕರ ಇವರಿಗೆ ” ಯಕ್ಷ ಗೌರವಾಭಿನಂದನೆ” ನಡೆಯಲಿದೆ.
ಪ್ರಸಿದ್ಧ ವಾಸ್ತುತಜ್ಞ ರಾಜಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಹಾಗೂ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ ಆಶೀರ್ವಚನ ನೀಡಲಿದ್ದು, ಟಿ ಶ್ಯಾಮ್ ಭಟ್, ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಡಾ.ಮೋಹನ್ ಆಳ್ವ,ಮನಪಾ ಮೇಯರ್ ಮನೋಜ್ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ
ರಾತ್ರಿ 8 ಗಂಟೆಗೆ ಪ್ರಸಿದ್ಧ ಕೂಡುವಿಕೆಯಲ್ಲಿ “ರಾಜಾ ದಂಡಕ” ಎಂಬ ಪುರಾಣ ಅಖ್ಯಾನವು ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಕೆ.ಚಂದ್ರಶೇಖರ, ಶರತ್ ಕುಮಾರ್ ಕದ್ರಿ, ಪಿ.ಎ.ಪೂಜಾರಿ, ಡಾ.ಮೀನಾಕ್ಷಿ ರಾಮಚಂದ್ರ ಮೊದಲಾದವರು ಉಪಸ್ಥಿತರಿದ್ದರು.