ಮಂಗಳೂರು. ಮಂಗಳೂರು ಹಾಗೂ ಮುಂಬೈಯಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ಶಾಂತಲಾ ಪ್ರಶಸ್ತಿ ವಿಜೇತ ಶ್ರೀಮತಿ ಜಯಲಕ್ಷ್ಮಿ ಆಳ್ವಾರಿಂದ ಆರಂಭಗೊಂಡು ಇದೀಗ ಅವರ ಸುಪುತ್ರಿ ಡಾ.ಆರತಿ ಶೆಟ್ಟಿ ಹಾಗೂ ಮೊಮ್ಮಗಳು ಶ್ರೀಮತಿ ಸಾತ್ವಿಕಾ ರೈ ಅವರಿಂದ ನಡೆಸಲ್ಪಡುವ ಶ್ರೀದೇವಿ ನೃತ್ಯ ಕೇಂದ್ರದ ಸುವರ್ಣ ಹಬ್ಬದ ಶುಭ ಸಂದರ್ಭದಲ್ಲಿ ನಾಟ್ಯಾಲಯದ ದ್ವೀತಿಯ ಶಾಖೆಯು ಮೂಡಬಿದಿರೆಯ ದವಳತ್ರಯ ಜೈನ ಕಾಶಿ ಟ್ರಸ್ಟ್ ಶ್ರೀ ದಿಗಂಬರ ಜೈನಮಠ ಸಹಯೋಗದಲ್ಲಿ ರಮಾರಾಣಿ ಶೋಧ ಸಂಸ್ಥಾನ ಸಭಾ ಭವನದಲ್ಲಿ ದಿನಾಂಕ 5 ರಂದು ಶುಭಾರಂಭ ಗೊಳ್ಳಲಿದೆಯೆಂದು ಡಾ.ಆರತಿ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪೂರ್ವಾಹ್ನ 10ಗಂಟೆಗೆ ಸರಿಯಾಗಿ ಡಾ.ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಯವರ ಆಶೀರ್ವಚನದೊಂದಿಗೆ ತರಗತಿಯ ಉದ್ಘಾಟನೆ ನಡೆಯಲಿದೆ. ಕಟೀಲು ಕ್ಷೇತ್ರದ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರು ಆಶೀರ್ವಚನ ನೀಡಿ ಹರಸಲಿದ್ದಾರೆ ಡಾ.ಹರಿಕ್ರಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಪ್ರದೀಪ್ ಕುಮಾರ್ ಕಲ್ಕೂರ,ಹರೀಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಶ್ರೀದೇವಿ ನ್ರತ್ಯಕೇಂದ್ರ ಮಂಗಳೂರು ಇದರ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿರುವುದು.
ಪತ್ರಿಕಾಗೋಷ್ಠಿಯಲ್ಲಿ ಹರಿಕ್ರಷ್ಣ ಪುನರೂರು,ಹರೀಶ್ ಶೆಟ್ಟಿ, ಸಾತ್ವಿಕಾ ರೈ, ಉಪಸ್ಥಿತರಿದ್ದರು.
ಚಿತ್ರ- ಶಶಿ ಬೆಳ್ಳಾಯರು.