ತಮಿಳು ನಟ ವಿಶಾಲ್ ಇತ್ತೀಚೆಗೆ ತಮ್ಮ ಅಭಿನಯದ ಮದಗಜರಾಜ ಚಿತ್ರದ ಪ್ರಿ ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿದ್ದರು.2012 ರಲ್ಲಿ ಸುಂದರ್ ಸಿ ನಿರ್ದೇಶನದ ಮದಗಜರಾಜ ಚಿತ್ರ ಕಾರಣದಿಂದ ಬಿಡುಗಡೆಯಾಗದೆ 12 ವರ್ಷಗಳ ನಂತರ ಸಂಕ್ರಾಂತಿ ಹಬ್ಬದ ಸಲುವಾಗಿ ಇದೇ ದಿನಾಂಕ ಜನವರಿ 12 ರಂದು ತೆರೆಗೆ ಬರಲಿದ್ದು ಪ್ರಚಾರದ ಅಂಗವಾಗಿ ಚಿತ್ರ ತಂಡವು ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ವಿಶಾಲ್ ಕೂಡಾ ಭಾಗವಹಿಸಿದ್ದರು ಆದರೆ ಆ ಕಾರ್ಯಕ್ರಮದಲ್ಲಿ ವಿಶಾಲ್ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದದು ಕಂಡುಬಂದಿದ್ದು ಭಾಗವಹಿಸಲು ವೇದಿಕೆ ಏರಲು ಸಹಾಯಕನ ಬೆಂಬಲವನ್ನು ತೆಗೆದುಕೊಳ್ಳುವುದು ಕಂಡು ಬಂದಿತು. ನಟ ವಿಶಾಲ್ ಅವರನ್ನು ಕಂಡ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ ಅವರು ಗುರುತಿಸಲಾಗದಷ್ಟು ಬದಲಾಗಿದ್ದು ಅನಾರೋಗ್ಯದಿಂದ ಬಳಲುತ್ತಿದ್ದಾರೆ.ಸಿನಿಮಾ ಕುರಿತು ಮಾತನಾಡಲು ಮೈಕ್ ಹಿಡಿದಾಗ ಕೈ ನಡುಗುತ್ತಿತ್ತು.ಸರಿಯಾಗಿ ಮಾತನಾಡಲು ಆಗದೆ ತೊದಲುತ್ತಿದ್ದರು ಪದಗಳ ಉಚ್ಚಾರಣೆ ಸರಿಯಾಗಿ ಬಂದಿಲ್ಲ ಎನ್ನಲಾಗಿದೆ.ನಿಂತು ಮಾತನಾಡುವಾಗ ಮೈಕ್ ಹಿಡಿದ ಕೈ ಸಿಕ್ಕಾಪಟ್ಟೆ ನುಡಗಿದ ಹಿನ್ನೆಲೆ, ದಿಢೀರ್ ಚೇರ್ ಮೇಲೆ ಕುಸಿದಿದ್ದಾರೆ. ನಂತರ ಮಾತನಾಡಲಾಗದೆ, ಕಣ್ಣಿಗೆ ಹಾಕಿದ್ದ ಕನ್ನಡಕ ತೆಗೆದು, ಕಣ್ಣೀರು ಹೊರಹಾಕಿದ್ದಾರೆ.
ವಿಶಾಲ್ ಅವರು ಈ ರೀತಿ ತೊಂದರೆ ಎದುರಿಸಿರುವುದಕ್ಕೆ ಅವರಿಗೆ ತೀವ್ರವಾದ ಜ್ವರ ಇದದ್ದೇ ಕಾರಣ ಅಂತ ಹೇಳಲಾಗಿದೆ.ಇನ್ನೂ ಯಂಗ್ ಆಗಿರುವ ನಟನಿಗೆ ಅವರ ಆರೋಗ್ಯದಲ್ಲಿ ಏನಾಗಿದೆ ಎನ್ನುವ ಪ್ರಶ್ನೆಗಳು ಮೂಡಿದೆ. ಆದರೆ ಈ ಬಗ್ಗೆ ಅಧಿಕೃತ ಪ್ರಕಟಣೆ ಬಂದಿಲ್ಲ. ಆರೋಗ್ಯ ಸಮಸ್ಯೆಯ ನಡುವೆಯೂ ಅವರು ಕಾರ್ಯಕ್ರಮಕ್ಕೆ ಬಂದಿರುವ ಬಗ್ಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಇಷ್ಟೊಂದು ಆರೋಗ್ಯ ಸಮಸ್ಯೆ ಇರುವಾಗ ಅವರು ಬರಬಾರದಿತ್ತು. ಆರೋಗ್ಯ ಕಾಳಜಿ ಮಾಡಬೇಕು ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.