ಕೇರಳ ವಿಧಾನ ಸಭೆ ಹಮ್ಮಿಕೊಂಡ ಅಂತಾರಾಷ್ಟ್ರೀಯ ಪುಸ್ತಕೋತ್ಸವದ ಮೂರನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ವಿಧಾಸಭೆಯ ಅಧ್ಯಕ್ಷರಾದ ಯು ಟಿ ಖಾದರ್ ರವರು ಭಾಗವಹಿಸಿ ಶುಭ ಹಾರೈಸಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಕೂಡಾ ಪುಸ್ತಕೋತ್ಸವ ನಡೆಸುವ ಚಿಂತನೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್,ಕೇರಳ ವಿಧಾನಸಭಾಧ್ಯಕ್ಷ ಸಂಶೀರ್ ಹಾಗೂ ಕೇರಳ ವಿಪಕ್ಷ ನಾಯಕ ವಿ ಡಿ ಸತೀಶನ್ ಮುಂತಾದವರು ಉಪಸ್ಥಿತರಿದ್ದರು.