ಮಂಗಳೂರು. ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ದಿನಾಂಕ 14- 1-2025 ನೇ ಮಂಗಳವಾರ ಮಕರ ಸಂಕ್ರಾಂತಿಯ ಶುಭ ದಿನದಂದು ಶ್ರೀ ಕ್ಷೇತ್ರದಲ್ಲಿ ಸರ್ವ ಭಕ್ತಾದಿಗಳ ಶ್ರೇಯೋಭಿವ್ರದ್ದಿಗಾಗಿ “ಚಂಡಿಕಾ ಹೋಮವು ” ಶ್ರೀ ಕ್ಷೇತ್ರದ ತಂತ್ರಿವರೇಣ್ಯರಾದ ಕುಂಟಾರು ಶ್ರೀ ರವೀಶ್ ತಂತ್ರಿಯವರ ನೇತ್ರತ್ವದಲ್ಲಿ ಜರಗಲಿರುವುದು.
ಬೆಳಿಗ್ಗೆ 8ಕ್ಕೆ ಪ್ರಾರ್ಥನೆ, 9ರಿಂದ ಪೂಜಾ ಸಂಕಲ್ಪ, 12ಕ್ಕೆ ಯಾಗ ಪೂರ್ಣಾಹುತಿ, 12:30 ಕ್ಕೆ ಮಹಾಪೂಜೆ. ಮಧ್ಯಾಹ್ನ 1ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಸರ್ವಮಂಗಳೆ ಶ್ರೀ ಭಗವತಿ ಮಾತೆಯ ಕ್ರಪೆಗೆ ಪಾತ್ರರಾಗಬೇಕೆಂದು ಶ್ರೀ ಕ್ಷೇತ್ರದ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.