ಯಶ್ ಅವರು ಸಿನಿಮಾ
ನಟ ಯಶ್ ಅವರ ಅಭಿಮಾನಿಗಳ ಪಾಲಿಗೆ ಇಂದು (ಜನವರಿ 8) ಹಬ್ಬ. ಏಕೆಂದರೆ ಇಂದು ಅವರ ನೆಚ್ಚಿನ ನಟನ ಬರ್ತ್ಡೇ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಹಾರತುರಾಯಿಗಳ ಸಹವಾಸಕ್ಕೆ ಹೋಗದೆ ಫ್ಯಾನ್ಸ್ ಸಾಮಾಜಿಕ ಕೆಲಸಗಳ ಮೂಲಕ ಬರ್ತ್ಡೇ ಆಚರಿಸುತ್ತಿದ್ದಾರೆ. ಈ ಮಧ್ಯೆ ಯಶ್ ಅವರ ಬರ್ತ್ಡೇನ ಆಪ್ತರ ಜೊತೆ ಆಚರಿಸಿಕೊಂಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯಶ್ ಅವರು ಸಿನೆಮಾ ಕೆಲಸಗಳಿಂದ ಹುಟ್ಟುಹಬ್ಬದ ದಿನ ಊರಿನಲ್ಲಿ ಇರೋದಿಲ್ಲ ಎಂದು ಈ ಮೊದಲೇ ಹೇಳಿದ್ದರು. ಅವರು ಗೋವಾದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿಯೇ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಅಲ್ಲಿ ಆಪ್ತರು ಹಾಗೂ ಕುಟುಂಬದವರ ಜೊತೆ ಯಶ್ ಅವರು ಬರ್ತ್ಡೇ ಆಚರಿಸಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
ಯಶ್ ಅವರ ಜೊತೆ ‘ಟಾಕ್ಸಿಕ್’ ಚಿತ್ರದ ನಿರ್ಮಾಪಕ ವೆಂಕಟ್ ನಾರಾಯಣ್, ಯಶ್ ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಕೂಡ ಇದ್ದಾರೆ. ಈ ಫೋಟೋನ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಈ ಬಾರಿ ಯಶ್ ಅವರು ಅಭಿಮಾನಿಗಳ ಜೊತೆ ಇರಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.