ಎಮರ್ಜೆನ್ಸಿ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದ್ದು ಇದೇ ಜನವರಿ 17 ರಂದು ಥಿಯೇಟರ್ಗಳಿಗೆ ಬರಲಿದೆ. ರಿಲೀಸ್ಗೂ ಮುನ್ನ ಟ್ರೇಲರ್ ಸಖತ್ ಸದ್ದು ಮಾಡಿದ್ದು. ಟ್ರೇಲರ್ ನೋಡಿದ ಪ್ರತಿಯೊಬ್ಬರೂ ನಟಿ ಕಂಗನಾ ರಣಾವತ್ ಅಭಿನಯಕ್ಕೆ ತಲೆ ಬಾಗಿದ್ದಾರೆ. ಕಂಗನಾ ಎಂದಿಗೂ ಫ್ಯಾನ್ಸ್ಗೆ ನಿರಾಸೆ ಮಾಡಲ್ಲ ಎಂಬುವುದಕ್ಕೆ ಈ ಸಿನಿಮಾ ಸಾಕ್ಷಿಯಾಗುತ್ತೆ.ಕಳೆದ ವರ್ಷದಿಂದ ಈ ಚಿತ್ರ ವಿವಾದಗಳಿಂದ ಸುತ್ತುವರಿದಿದ್ದು 2 ಬಾರಿ ಬಿಡುಗಡೆಯನ್ನು ಮುಂದೂಡಿದ ಈ ಚಿತ್ರ ಈಗ ಥಿಯೇಟರ್ಗೆ ಬರಲು ರೆಡಿಯಾಗಿದೆ.
ಬಾಲಿವುಡ್ ‘ಕ್ವೀನ್’ ಕಂಗನಾ ರಣಾವತ್ ಇದೀಗ ರಾಜಕೀಯದಲ್ಲೂ ಮಿಂಚಿನ ಸಂಚಲನ ಮೂಡಿಸಿದ್ದಾರೆ. ಸಂಸದೆಯಾದ ಬಳಿಕ ಕಂಗನಾ ರಣಾವತ್ ತಮ್ಮ ಮುಂಬರುವ ಚಿತ್ರ ‘ಎಮರ್ಜೆನ್ಸಿ’ ಬಿಡುಗಡೆಗೆ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ. ಎಮರ್ಜೆನ್ಸಿ ಸಿನಿಮಾ ಇಂದಿರಾ ಗಾಂಧಿ ಅವರ ಅಧಿಕಾರಾವಧಿಯಲ್ಲಿ 1970ರಲ್ಲಿ ಹೇರಲಾದ ತುರ್ತು ಪರಿಸ್ಥಿತಿಯನ್ನು ಆಧರಿಸಿದೆ. ಎಮರ್ಜೆನ್ಸಿ ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರ್ತಿದ್ದಂತೆ ಕಂಗನಾ ರಣಾವತ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯನ್ನ ಭೇಟಿಯಾಗಿದ್ದಾರೆ.
ನಾನು ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿಯನ್ನ ಭೇಟಿ ಮಾಡಿದ್ದೇನೆ. ಅವರ ಜೊತೆ ಮಾತು ಆರಂಭಿಸುತ್ತಿದ್ದಂತೆ ನಾನು ಅವರಿಗೆ ನೀವು ಎಮರ್ಜೆನ್ಸಿ ಸಿನಿಮಾ ನೋಡ್ಬೇಕು ಎಂದು ಹೇಳಿದೆ ಎಂದಿದ್ದಾರೆ. ಅವರು ಕೂಡ ಸಿನಿಮಾ ನೋಡುವ ನಿರೀಕ್ಷೆ ಇದೆ ಎಂದು ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಹೇಳಿದ್ದಾರೆ.
ಎಮರ್ಜೆನ್ಸಿ ಸಿನಿಮಾದಲ್ಲಿ ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ವಿಶಾಕ್ ನಾಯರ್, ಆಧೀರ್ ಭಟ್, ಸತೀಶ್ ಕೌಶಿಕ್ ಮುಂತಾದವರು ನಟಿಸಿದ್ದಾರೆ.