ಬೆಂಗಳೂರು .16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿಯಾಗಿ ನಟ ಕಿಶೋರ್ ನೇಮಕಗೊಂಡಿದ್ದಾರೆ. ರಾಜ್ಯ ಸರ್ಕಾರ ಈ ಕ್ರಮವನ್ನು ಕೈಗೊಂಡಿದ್ದು. ನಟ ಕಿಶೋರನ್ನು ರಾಯಭಾರಿಯಾಗಿ ನೇಮಿಸಿದೆ.
ಮಾ.1 ರಿಂದ 8ರ ವರೆಗೆ ಚಿತ್ರೋತ್ಸವ ನಡೆಯಲಿದೆ. ಸುಮಾರು 8 ದಿನಗಳ ಕಾಲ ಬೆಂಗಳೂರಿನ 13 ಚಿತ್ರಮಂದಿರಗಳಲ್ಲಿ ವಿವಿಧ ಚಿತ್ರಗಳ ಪ್ರದರ್ಶನ ಇರಲಿದೆ.ಈ ಸಾಲಿನ ಚಲನ ಚಿತ್ರೋತ್ಸವವು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಆಶಯದಡಿ ನಡೆಯಲಿದೆ. ಕಳೆದ ಬಾರಿ ‘ಸಾಮಾಜಿಕ ನ್ಯಾಯ’ ಎಂಬ ಆಶಯದಡಿ ನಡೆದಿತ್ತು.
ಸುಮಾರು 60 ದೇಶಗಳು ಈ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸಲಿದ್ದು, ಕನ್ನಡ ಸೇರಿ ವಿವಿಧ ಭಾಷೆಗಳ ಒಟ್ಟಾರೆ 200 ಚಲನಚಿತ್ರಗಳು 13 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿವೆ. ಬೆಂಗಳೂರು ಮತ್ತು ರಾಜ್ಯದ ನಾಗರಿಕರಿಗೆ ಅಂತರರಾಷ್ಟ್ರೀಯ ಚಲನಚಿತ್ರ ವೀಕ್ಷಿಸಲು, ಇದೊಂದು ಸುವರ್ಣ ಅವಕಾಶ