ಮಂಗಳೂರು ; ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಬಂಧಿತ ಮತ್ತೊಬ್ಬ ಆರೋಪಿ ಮೇಲೆ ಪೋಲಿಸರು ಗುಂಡು ಹಾರಿಸಿದ್ದಾರೆ.
ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮುರುಗನ್ ದೇವರ್ ಮತ್ತು ಯೋಶುವಾ ರಾಜೇಂದ್ರನ್ ಅವರನ್ನು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಬಂಧಿಸಲಾಗಿತ್ತು. ಆರೋಪಿಗಳನ್ನು ಫೆ.3ರ ವರೆಗೆ ಪೊಲೀಸರು ಕಸ್ಟಡಿ ಪಡೆದು ವಿಚಾರಣೆ ನಡೆಸುತ್ತಿದ್ದರು.ಇಂದು ಮಧ್ಯಾಹ್ನ ಕೇರಳ ಗಡಿಭಾಗದ ಅಜ್ಜಿನಡ್ಕ ಎಂಬಲ್ಲಿ ಸ್ಥಳ ಮಹಜರು ಉದ್ದೇಶಕ್ಕಾಗಿ ಮುರುಗನನ್ನು ಕರೆದೊಯ್ದಿದ್ದಾಗ ಪೋಲಿಸ್ ಕಾನ್ಸ್ ಸ್ಟೇಬಲ್ ಮಂಜುನಾಥ ಎಂಬವರ ಮರ್ಮಾಂಗಕ್ಕೆ ಒದ್ದು ಪರಾರಿಯಾಗಲು ಯತ್ನಿಸಿದ್ದ ಈ ವೇಳೆ ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ಫೈರಿಂಗ್ ಮಾಡಿದ್ದು ಆರೋಪಿ ಕಾಲಿಗೆ ಗುಂಡುಬಿದ್ದಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಶಶಿ ತೇವರ್,ಯೋಶುವಾ ರಾಜೇಂದ್ರನ್ ,ಮುರುಗನ್ ದೇವರ್ ತಂಡವು ಅಜ್ಜಿನಡ್ಕ ಖಾಸಗಿ ನಿರ್ಜನ ಪ್ರದೇಶದಲ್ಲಿ ಪಿಸ್ತೂಲೊಂದನ್ನು ಬಚ್ಚಿಟ್ಟಿದ್ದಾರೆ ಎನ್ನಲಾಗಿದ್ದು. ಈ ಹಿನ್ನೆಲೆಯಲ್ಲಿ ಶಶಿ ತೇವರ್ ಬಚ್ಚಿಟ್ಟಿದ್ದ ಪಿಸ್ತೂಲನ್ನು ವಶಕ್ಕೆ ಪಡೆಯಲು ಇಂದು ಮಧ್ಯಾನ್ಹ ಸ್ಥಳ ಮಹಜರಿಗೆ ಬಂದಿದ್ದಾಗ ಈ ಘಟನೆ ನಡೆದಿದೆ.
ಗಾಯಾಳು ಮುರುಗನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.