ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಛನಾಡಿ ಗ್ರಾಮದ ಸಂತೋಷ ನಗರ ಕೆರಮ ಎಂಬ ಭಾಗದಲ್ಲಿ ಕಳೆದ ಎರಡು ತಿಂಗಳಿನಿಂದ ಅಕ್ರಮ ಮನೆಗಳ ನಿರ್ಮಾಣವು, ಪಚ್ಚನಾಡಿ ಜನಪ್ರತಿನಿಧಿಗಳ ಸಂಪೂರ್ಣ ಬೆಂಬಲದಲ್ಲಿ ಸ್ಥಳೀಯ ವಿಜಯ್ ಕುಮಾರ್ ಶೆಟ್ಟಿ ಎಂಬವರ ಮುಂದಾಳತ್ವದಲ್ಲಿ ಯಾವುದೇ ದಾಖಲೆಗಳಿಲ್ಲದೆ ಸುಮಾರು ಹತ್ತು ಹದಿನೈದು ಅಕ್ರಮ ಮನೆಗಳ ನಿರ್ಮಾಣ ಕೆಲಸ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿತ್ತು.
ಈ ಜಾಗದ ಹಿನ್ನೆಲೆ ಗಮನಿಸುವುದಾದರೆ ಸರ್ವೆ ನಂಬರ್ 61/13 ಈ ಜಾಗವು ಬಹಳ ಹಿಂದೆ ಸೀತಮ್ಮ ಎಂಬ ಬ್ರಾಹ್ಮಣ ಮಹಿಳೆಯ ಎರಡು ಎಕರೆ ವರ್ಗ ಜಾಗದ ಜೊತೆ ಸುಮಾರು 50 ಸೆಂಟ್ಸ್ ಕುಮ್ಕಿ (ಸರಕಾರಿ ) ಜಾಗವಾಗಿತ್ತು. ಅವರು ತೀರಿಕೊಂಡ ನಂತರ ವಾರಿಸುದಾರರಿಲ್ಲದೆ ಪಾಳು ಬಿದ್ದಿತ್ತು. ಆದರೆ ಸೀತಮ್ಮ ತಮ್ಮ ಜೀವಿತಾವಧಿಯಲ್ಲಿ ತಮ್ಮ ಸಂಬಂಧಿಕರಾದ ಸ್ಥಳೀಯ ಗಣೇಶ್ ಭಟ್ ಎಂಬವರಿಗೆ ವಿಲ್ ಮಾಡಿಕೊಟ್ಟಿದ್ದರು. ಈ ಗಣೇಶ್ ಭಟ್ಟರು ಈಗಿನ ಕಾರ್ಪೊರೇಟರ್ ರವರ ಗಂಡ ರವೀಂದ್ರ ನಾಯಕ್ ಅವರ ಬಳಿ ತನ್ನಲ್ಲಿದ್ದ ವಿಲ್ಲನ್ನು ಕೊಟ್ಟು ಆ ಜಾಗಕ್ಕೆ ರೆಕಾರ್ಡ್ ಮಾಡಿ ಕೊಡುವಂತೆ ವಿನಂತಿಸಿದ್ದರು.
ವಿಷಯ ತಿಳಿದ ರವೀಂದ್ರ ನಾಯಕ್ ಸ್ಥಳಿಯ ವಿಜಯಕುಮಾರ್ ಎಂಬವರನ್ನು ಅಕ್ರಮದ ಸಾರಥಿಯಾಗಿ ಮಾಡಿ, ಸದ್ರಿ ಕುಮ್ಕಿ(ಸರಕಾರಿ ) ಜಾಗವನ್ನು ಕಾನೂನು ಬಾಹಿರವಾಗಿ ಅವರ ಮೂಲಕ ಅಕ್ರಮ ಪರ ಬಾರೆ ಮಾಡುವ ಕೆಲಸ ಮಾಡಿದರು. ಪರಿಣಾಮ ಯಾವುದೇ ದಾಖಲೆಗಳಿಲ್ಲದ ಅಕ್ರಮ ಮನೆ ನಿರ್ಮಾಣ ಕೆಲಸ ಪ್ರಗತಿಯಲ್ಲಿ ಇದೆ. ಫಲಶ್ರುತಿ ವಿಜಯಕುಮಾರ್ ಶೆಟ್ಟಿ ಕಾರ್ಪೊರೇಟರ್ ರವರನ್ನು ಹೊಗಳಿ ಅಟ್ಟಕೇರಿಸಿದ ನಾಲ್ಕು ಬ್ಯಾನರ್ ಗಳನ್ನು ಪಚ್ಚನಾಡಿ ಪರಿಸರದಲ್ಲಿ ಆಳವಡಿಸಿರುವುದನ್ನು ತಾವು ಗಮನಿಸಿರಬಹುದು.
ವಿಷಯ ತಿಳಿದ ಕೆಲವು ಸ್ಥಳೀಯ ಸಮಾಜಮುಖಿ ನಾಯಕರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಿದರೆ, ಆಮ್ ಆದ್ಮಿ ಪಕ್ಷ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ನಿರ್ಮಾಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.
ಇದೀಗ ದಿನಾಂಕ 30.01.2025 ರಂದು ಮಂಗಳೂರು ಮಹಾನಗರ ಪಾಲಿಕೆಯ ನಗರಾಭಿವೃದ್ಧಿ ಇಲಾಖೆಯು ಅತಿಕ್ರಮಣಕಾರರಿಗೆ ನೋಟಿಸ್ ನೀಡಿದ್ದು ಸೂಕ್ತ ದಾಖಲೆಗಳನ್ನು ನೀಡದೆ ಹೋದರೆ ಮುಂದಿನ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿರುತ್ತಾರೆ.