ಫೇಸ್ಬುಕ್ ಮೂಲಕ ಪರಿಚಯವಾದ ಅನ್ಯಕೋಮಿನ ಜೋಡಿಯೊಂದು ವಿವಾಹವಾದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಬೂದನ ಗೌಡನ ಮಗ ಹರೀಶ್ ಗೌಡ (24 ವರ್ಷ) ಹಾಗೂ ಮೂಡಬಿದ್ರೆಯ ನೆಲ್ಲಿಕಾರಿನ ಯುವತಿ ಸುಹಾನ (19) ಫೇಸ್ಬುಕ್ ಮೂಲಕ ಪರಿಚಯವಾಗಿದ್ದು ಬಳಿಕ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.ಯುವತಿ ಎಂದಿನಂತೆ ಕಂಪ್ಯೂಟರ್ ಕ್ಲಾಸ್ ಗೆಂದು ಮನೆಯಿಂದ ತೆರಳಿದ್ದು ಆದರೆ ಮನೆಗೆ ವಾಪಸಾಗದ ಕಾರಣ ಆಕೆಯ ಮನೆಯವರು ಮೂಡುಬಿದ್ರೆ ಪೋಲಿಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.
ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಹಿಂದೂ ಯುವಕ ಮನೆ ಮಂದಿಯ ಒಪ್ಪಿಗೆಯ ಮೇರೆಗೆ ಹಿಂದೂ ಸಂಪ್ರದಾಯ ಪ್ರಕಾರ ಜ.8 ರಂದು ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಬಳಿಕ ಈ ಜೋಡಿ ಧರ್ಮಸ್ಥಳ ಪೋಲಿಸ್ ಠಾಣೆಗೆ ಬಂದು ತಾವು ಸ್ವ ಇಚ್ಛೆಯಿಂದ ಮದುವೆಯಾಗಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.