‘
ಮಂಗಳೂರು: ಸ್ವರಾಲಯ ಸಾಧನಾ ಫೌಂಡೇಶನ್ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸ್ವರ ಸಂಕ್ರಾಂತಿ ಉತ್ಸವ-2025 ಅನ್ನು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಜ.14ರಂದು ಜರುಗಲಿದೆ ಎಂದು ವಯಲನಿಸ್ಟ್ ವಿಶ್ವಾಸ್ ಕೃಷ್ಣ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಮಧ್ಯಾಹ್ನ 2 ಗಂಟೆಯಿಂದ ಕಲಾ ಶಾಲೆ ವಿದ್ಯಾರ್ಥಿಗಳಿಂದ ವಯಲಿನ್ ಪ್ರಸ್ತುತಿ ನಡೆಯಲಿದ್ದು, ಮಧ್ಯಾಹ್ನ 3.30ಕ್ಕೆ ಸಭಾ
ಕಾರ್ಯಕ್ರಮ ಹಾಗೂ ಮೂವರು ಹಿರಿಯ ಸಾಧಕರಿಗೆ ‘ಸ್ವರ ಸಾಧನಾ’ ಪ್ರಶಸ್ತಿ ಪ್ರದಾನ ನಡೆಯಲಿದೆ, ಸಂಜೆ 5 ಗಂಟೆಯಿಂದ
ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಖ್ಯಾತ ಕಲಾವಿದರಾದ ರಂಜನಿ- ಗಾಯತ್ರಿ ಅವರಿಂದ ವಿಶಿಷ್ಟ ಪರಿಕಲ್ಪನೆಯ `ರಸ ಬೈರಾಗ’ ಸಂಗೀತ ಕಛೇರಿ ನಡೆಯಲಿದೆ. ವಯಲಿನ್ ನಲ್ಲಿ ವಿದ್ವಾನ್ ವಿಠಲ್ ರಂಗಲ್, ಮೃದಂಗದಲ್ಲಿ ವಿದ್ವಾನ್ ಸಾಯಿ ಗಿರಿಧರ್, ಘಟಂನಲ್ಲಿ ವಿದ್ವಾನ್ ಎಸ್.ಕೃಷ್ಣ ಸಹಕರಿಸಲಿದ್ದಾರೆ.
ನಿಡಸೋಸಿ ಶ್ರೀ ದುರದುಂಡೀಶ್ವರ ಮಠದ ಜಗದ್ಗುರು ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಹಾಗೂ ಬಾಳೆಕುದ್ರು ಮಠದ ಶ್ರೀಮದ್
ಜಗದ್ಗುರು ಶ್ರೀ ವಾಸುದೇವ ಸದಾಶಿವಾಶ್ರಮ ಮಹಾಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹಾಗೂ ಸ್ವರ ರತ್ನ ವಿದ್ವಾನ್ ವಿಶಲ್ ರಾಮಮೂರ್ತಿ ಭಾಗವಹಿಸಲಿದ್ದಾರೆ.
ಪ್ರಸಿದ್ಧ ಮೃದಂಗ ವಾದಕ ವಿದ್ವಾನ್ ನೈಬಿ ಪ್ರಭಾಕರ ಶೃಂಗೇರಿ ಮತ್ತು ಸಂಗೀತ ಕ್ಷೇತ್ರದ ಸಾಧಕಿ ವಿದುಷಿ ಸಾವಿತ್ರಿ ಪ್ರಭಾಕರ್
ದಂಪತಿ, ಭರತನಾಟ್ಯ ಕ್ಷೇತ್ರದ ಸಾಧಕಿ, ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯಗುರು ವಿದುಷಿ ಶಾರದಾ ಮಣಿಶೇಖರ್
ಹಾಗೂ ಮೃದಂಗದ ಸಾಧಕರಾದ ವಿದ್ವಾನ್ ಕುಂಜೂರು ಎಚ್.ರವಿಕುಮಾರ್ ಅವರಿಗೆ ಸ್ವರ ಸಾಧನಾ ಪ್ರಶಸ್ತಿ ಪ್ರದಾನ
ಕಾರ್ಯಕ್ರಮ ನಡೆಯಲಿದೆ.
ಸಂಗೀತ ಪ್ರೇಮಿಗಳು ಪ್ರವೇಶ ಪತ್ರದ ಮೂಲಕ ಉಚಿತವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಪ್ರವೇಶ ಪತ್ರವನ್ನು ಪತ್ತುಮುಡಿ ಹೋಟೆಲ್ ಜನತಾ ಡಿಲಕ್ಸ್ ಸಮೀಪದ ತಕ್ವಿಲಾ ಕಟ್ಟಡದ ಮೊದಲ ಮಹಡಿಯಲ್ಲಿರುವ ಎ1 ಲಾಜಿಕ್ಸ್ ಸಂಸ್ಥೆಯ ಕಚೇರಿಯಿಂದ ಪಡೆಯಬಹುದಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಶ್ರೀಕೃಷ್ಣ ನೀರಮೂಲೆ, ರಮೇಶ್, ಶ್ರೇಷ್ಠ ಲಕ್ಷ್ಮಿ, ಡಾ.ಸುಮಾ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ. ಶಶಿ ಬೆಳ್ಳಾಯರು