2024ರಲ್ಲಿ ಬಿಡುಗಡೆಯಾಗಿದ್ದ ಹನುಮಾನ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು. ಬಳಿಕ ಈ ಸಿನಿಮಾದ ಬಹು ನಿರೀಕ್ಷಿತ ಸೀಕ್ವೆಲ್ ಆಗಿ ‘ ಜೈ ಹನುಮಾನ್ ‘ ಸಿನಿಮಾ ಮಾಡಲು ಮೈತ್ರಿ ಮೂವಿ ಮೇಕರ್ಸ್ ಸಜ್ಜಾಗಿದೆ.
‘ ಹನುಮಾನ್’ ಸಿನಿಮಾ ನಿರ್ದೇಶಿಸಿ ಸೂಪರ್ ಹಿಟ್ ನೀಡಿರುವ ಪ್ರಶಾಂತ್ ವರ್ಮಾ ಅವರ ಮುಂದಿನ ತೆಲುಗು ಸಿನಿಮಾ ‘ಜೈ ಹನುಮಾನ್ ‘ನಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ. ಸಿನಿಮಾದ ಪೋಸ್ಟರ್ ಹಾಗೂ ಕಿರು ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಅದರ ಬೆನ್ನಲ್ಲೆ ರಿಷಬ್ ಶೆಟ್ಟಿ ನಿರ್ದೇಶಕ ಪ್ರಶಾಂತ್ ವರ್ಮ,ಚಿತ್ರದ ನಿರ್ಮಾಪಕ ಸೇರಿದಂತೆ ಚಿತ್ರತಂಡದ ವಿರುದ್ಧ ದೂರು ಸಹ ದಾಖಲಾಗಿದೆ. ಚಿತ್ರದಲ್ಲಿ ಹನುಮಂತನ ಮುಖವನ್ನು ಮನುಷ್ಯನಂತೆ ತೋರಿಸಲಾಗಿದೆ ಎಂಬುದು ಅವರ ದೂರು.
ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ ವಕೀಲ ಮಾಮಿದಾಳ್ ತಿರುಮಾಲ್ ಅವರು, ‘ಜೈ ಹನುಮಾನ್’ ವಿರುದ್ಧ ನಾಂಪಲ್ಲಿ ಕ್ರಿಮಿನಲ್ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವುದಾಗಿ ಹೇಳಿದರು. ಚಿತ್ರದ ಫಸ್ಟ್ ಲುಕ್ ಅನ್ನು ಅಕ್ಟೋಬರ್ 30ರಂದು ಬಿಡುಗಡೆ ಮಾಡಲಾಯಿತು.
ಈಗ ಬಿಡುಗಡೆ ಆಗಿರುವ ಪೋಸ್ಟರ್ ಹಾಗೂ ಟೀಸರ್ ನಲ್ಲಿ ರಿಷಬ್ ಶೆಟ್ಟಿ ಉದ್ದನೆಯ ಗಡ್ಡ ಹಾಗೂ ಉದ್ದನೆಯ ಕೂದಲು ಬಿಟ್ಟುಕೊಂಡು ಶ್ರೀರಾಮನ ಮೂರ್ತಿಯನ್ನು ಅಪ್ಪಿಕೊಂಡಿರುವ ಚಿತ್ರ ಇದೆ. ಹನುಮಂತನ ಮುಖವನ್ನೇ ಬದಲಾಯಿಸುವ ಮೂಲಕ, ಹನುಮನ ಪಾತ್ರವನ್ನು ತಿದ್ದುವ ಕೆಲಸ ಮಾಡಲಾಗಿದೆ.
ಎಲ್ಲರಿಗೂ ತಿಳಿದಿರುವಂತೆ ಹನುಮಂತನ ಮುಖ ವಾನರ ಮುಖವನ್ನು ಹೋಲುತ್ತದೆ. ಆದರೆ ‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿಯ ಮುಖವನ್ನು ಸಾಮಾನ್ಯ ಮನುಷ್ಯನ ಮುಖದಂತೆಯೇ ತೋರಿಸಲಾಗಿದೆ. ವಾನರನ ರೀತಿ ಹನುಮಂತನನ್ನು ತೋರಿಸಿಲ್ಲ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡುವ ಕಾರ್ಯ ಇದಾಗಿದ್ದು, ಶೀಘ್ರವೇ ಸಿನಿಮಾದ ಪೋಸ್ಟರ್, ಟೀಸರ್ ಗಳನ್ನುಹಿಂಪಡೆಯುವಂತೆ ಆದೇಶಿಸಬೇಕೆಂದು ವಕೀಲ ತಿರುಮಲ ವರ್ಮಾ ಅರ್ಜಿ ದಾಖಲಿಸಿದ್ದಾರೆ.
ಈ ಹಿಂದೆ ಭಾರತೀಯ ಚಿತ್ರರಂಗದಲ್ಲಿ ನಿರ್ಮಿಸಲಾಗಿರುವ ಎಲ್ಲ ಪೌರಾಣಿಕ ಸಿನಿಮಾಗಳಲ್ಲಿ ಹನುಮಂತನ ಪಾತ್ರವನ್ನು ತೋರಿಸಿದ್ದಕ್ಕಿಂತಲೂ ಭಿನ್ನವಾಗಿ ‘ಜೈ ಹನುಮಾನ್’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ
ಅದನ್ನು ನೋಡಿಯೇ ತಾವು ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ.