ಮಂಗಳೂರು ನಗರದ ಬೊಳೂರಿನಲ್ಲಿರುವ ಮಾತಾ ಅಮ್ರತಾನಂದಮಯಿ ಮಠದಲ್ಲಿ ಭಾನುವಾರ ಜನವರಿ 19ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3ರ ತನಕ 18 ವರ್ಷದ ಒಳಗಿನ ಮಕ್ಕಳಿಗಾಗಿ ಹ್ರದ್ರೋಗ ಚಿಕಿತ್ಸಾ ಶಿಬಿರ ಮತ್ತು ಉಚಿತ ಹ್ರದಯ ಚಿಕಿತ್ಸೆ ಸೇವಾ ಶಿಬಿರವು ಜರಗಲಿರುವುದು ಎಂದು
ಡಾ.ದೇವಿಪ್ರಸಾದ್ ಎಸ್.ಹೆಜಮಾಡಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಶ್ವದ ಶ್ರೇಷ್ಠ ಆಸ್ಪತ್ರೆಗಳಲ್ಲೊಂದಾದ ಸದ್ಗುರು ಶ್ರೀ ಮಾತಾ ಅಮ್ರತಾನಂದಮಯಿ ದೇವಿಯವರ ಮಾತಾ ಅಮ್ರತಾನಂದಮಯಿ ಮಠದ ವತಿಯಿಂದ ನಡೆಸಲ್ಪಡುವ ಕೊಚ್ಚಿಯ ಪ್ರಖ್ಯಾತ ಆಸ್ಪತ್ರೆ ಅಮ್ರತಾ ಆಸ್ಪತ್ರೆ ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಆಧುನಿಕ ಉಪಕರಣಗಳ ಸಹಿತ ಖ್ಯಾತ ತಜ್ಞ ವೈದ್ಯರುಗಳ ಸೇವೆ ಲಭ್ಯವಿದೆ.ಅಮ್ಮನವರು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿರುವ 18 ವರ್ಷದ ಒಳಗಿನ ಮಕ್ಕಳು ಹ್ರದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರೆ ಅಂತಹ ಮಕ್ಕಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೀಡುವ ಕೊಡುಗೆಯನ್ನು ಅಮ್ಮನವರು ನೀಡಿರುತ್ತಾರೆ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಭಾಗವಹಿಸುವ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.

ಈ ಶಿಬಿರದಲ್ಲಿ ಕೊಚ್ಚಿಯ ಅಮ್ರತಾ ಆಸ್ಪತ್ರೆಯ ಮಕ್ಕಳ ಹ್ರದಯ ರೋಗ ತಜ್ಞ ವೈದ್ಯರುಗಳು ಅಗತ್ಯ ತಪಾಸಣಾ ಸಾಧನಗಳೊಂದಿಗೆ ಮಂಗಳೂರಿಗೆ ಆಗಮಿಸಲಿದ್ದು ಸೂಕ್ತ ತಪಾಸಣೆ ನಡೆಸಲಿರುವರು.ಶಸ್ತ್ರಚಿಕಿತ್ಸೆ ಸಹಿತ ಉನ್ನತ ಮಟ್ಟದ ಚಿಕಿತ್ಸೆ ಅಗತ್ಯವಿರುವವರನ್ನು ಗುರುತಿಸಿ ಅವರಿಗೆ ಉಚಿತವಾಗಿ ಕೇರಳದ ಕೊಚ್ಚಿಯಲ್ಲಿರುವ ಅಮ್ರತಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಉಚಿತವಾಗಿ ನಡೆಸಲಾಗುವುದು.ಕಾರ್ಯಕ್ರಮದ ಬಗ್ಗೆ ಜಾಗ್ರತಿ ಮೂಡಿಸಿದ ಪರಿಣಾಮವಾಗಿ ಈಗಾಗಲೇ ರಾಜ್ಯಾದ್ಯಂತ ಅರ್ಹ ಫಲಾನುಭವಿಗಳು ಕರೆಮಾಡಿ ಈ ಉಚಿತ ಶಿಬಿರದಲ್ಲಿ ಭಾಗವಹಿಸುವ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.ಇವರಲ್ಲದೆ ಹೊರ ರಾಜ್ಯಗಳಿಂದಲೂ ಸಾರ್ವಜನಿಕರು ಆಸಕ್ತಿ ತೋರುತ್ತಿದ್ದಾರೆ.
ಮಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಯವರಿಗೆಂದು ಸೀಮಿತಗೊಳಿಸಿದ್ದರೂ ರಾಜ್ಯದಾದ್ಯಂತ ಗ್ರಾಮೀಣ ಪ್ರದೇಶಗಳ ಸಾರ್ವಜನಿಕರ ಬೇಡಿಕೆಯನ್ನು ಮನ್ನಿಸಿ ಈ ಉಚಿತ ಸೇವೆಯ ವ್ಯಾಪ್ತಿಯನ್ನು ರಾಜ್ಯದ ಪ್ರತಿ ಜಿಲ್ಲೆಗಳ ಜನರು ಪ್ರಯೋಜನ ಪಡೆಯಲು ಅನುಕೂಲವಾಗುವಂತೆ ವಿಸ್ತರಿಸಲಾಗಿದೆ

ಸುಮಾರು 2ರಿಂದ 5ಲಕ್ಷ ಖರ್ಚು ಬರುಬಹುದೆಂದು ಕಾರಣದಿಂದ ಚಿಕಿತ್ಸೆ ಪಡೆಯದೆ ಸಂಕಷ್ಟದಲ್ಲಿ ಇರುವ ರೋಗಿಗಳಿಗೆ ಈ ಕೊಡುಗೆ ಬಹಳ ಮಹತ್ವದ್ದಾಗಿದೆ.ರಾಜ್ಯಾದಾದ್ಯಂತ ವಿವಿಧ ಜಿಲ್ಲೆಗಳಿಂದ ಆಗಮಿಸುವ ರೋಗಿಗಳು ಹಾಗೂ ಅವರ ಪೋಷಕರಿಗೆ ದಿನಾಂಕ19 ರಂದು ಶಿಬಿರಕ್ಕೆ ಬರಲು ಅನುಕೂಲವಾಗುವಂತೆ ನಗರದ KSRTC ನಿಲ್ದಾಣದಿಂದ ಬೋಳೂರಿನ ಮಾತಾ ಅಮ್ರತಾನಂದಮಯಿ ಮಠದವರೆಗೆ ಉಚಿತ ಸಾರಿಗೆ ವ್ಯವಸ್ಥೆ ಹಾಗೂ ಶಿಬಿರಕ್ಕೆ ಆಗಮಿಸುವ ಫಲಾನುಭಾವಿಗಳು ಮತ್ತು ಅವರ ಪೋಷಕರು ಸೇವಾರ್ಥಿಗಳಿಗೆ ಉಪಹಾರ ಹಾಗೂ ಭೋಜನದ ವ್ಯವಸ್ಥೆ ಮಾಡಲಾಗುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ಅಮೀನ್,ಡಾ.ದೇವದಾಸ್ ಪುತ್ರನ್,ಡಾ.ವಸಂತ ಪೆರ್ಲ ಉಪಸ್ಥಿತರಿದ್ದರು

