ಮುಂಬೈ :ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಚೂರಿ ಇರಿತಕ್ಕೆ ಒಳಗಾಗಿ ಗಾಯಗೊಂಡು ಮುಂಬಯಿನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬಯಿಯ ಬಾಂದ್ರಾದಲ್ಲಿರುವ ಕರೀನಾ ಕಪೂರ್ ಅವರ ನಿವಾಸಕ್ಕೆ ನಸುಕಿನ ವೇಳೆ 2:30ಕ್ಕೆ ಕಳ್ಳನೊಬ್ಬ ನುಗ್ಗಿದ್ದು, ಆತ ಚೂರಿಯಿಂದ ಇರಿದ ಕಾರಣ ಬಾಲಿವುಡ್ ನಟ ಸೈಫ್ ಅಲಿ ಖಾನ್ ಗಾಯಗೊಂಡಿದ್ದಾರೆ.
ಅವರ ಶರೀರದಲ್ಲಿ ಆರು ಗಾಯಗಳಿದ್ದು, ಅವುಗಳ ಪೈಕಿ 2 ಗಂಭೀರ ಗಾಯಳು. ಒಂದು ಗಾಯ ಬೆನ್ನುಮೂಳೆಗೆ ಸಮೀಪ ಆಗಿದೆ. ನರಶಸ್ತ್ರಚಿಕಿತ್ಸಕ ನಿತಿನ್ ಡಾಂಗೆ, ಕಾಸ್ಮೆಟಿಕ್ ಸರ್ಜನ್ ಲೀನಾ ಜೈನ್ ಮತ್ತು ಅರಿವಳಿಕೆ ತಜ್ಞ ನಿಶಾ ಗಾಂಧಿ ಅವರನ್ನೊಳಗೊಂಡ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಸೈಫ್ ಅಲಿ ಖಾನ್ ತನ್ನ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ಮಲಗಿದ್ದಾಗ ದರೋಡೆಕೋರ ಈ ಕೃತ್ಯವೆಸಗಿದ್ದ.
ಮುಂಜಾನೆ 2.30ರ ವೇಳೆಗೆ ಕಳ್ಳರು ಮನೆ ಒಳಗೆ ನುಗ್ಗಿದ್ದಾರೆ. ಈ ವೇಳೆ ಎಲ್ಲರಿಗೂ ಎಚ್ಚರ ಆಗಿದೆ. ಆಗ ಸೈಫ್ ಅವರು ಕಳ್ಳರನ್ನು ತಡೆಯಲು ಹೋಗಿದ್ದು, ಈ ವೇಳೆ ಕಳ್ಳರು ಹಲ್ಲೆ ಮಾಡಿದ್ದಾರೆ. ತಕ್ಷಣ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸದ್ಯ ಕಳ್ಳರನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ.ಬಾಂದ್ರಾ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಶೋಧ ನಡೆಸಿದ್ದಾರೆ