ಮಂಗಳೂರಿನ ಹೊರ ವಲಯದ ಉಳ್ಳಾಲದ ಕೆಸಿ ರೋಡಿಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿಗೆ ನುಗ್ಗಿದ ಕಳ್ಳರು ಹಾಡಹಗಲೇ ದರೋಡೆ ನಡೆಸಿ ಪರಾರಿಯಾಗಿದ್ದಾರೆ .ಬ್ಯಾಂಕ್ಗೆ ನುಗ್ಗಿದ ಐದು ಜನರ ಖತರ್ನಾಕ್ ಕಳ್ಳರ ಗ್ಯಾಂಗ್ ಸಿಬ್ಬಂದಿಗೆ ಬೆದರಿಸಿ ಕೋಟಿಗಟ್ಟಲೇ ಹಣದ ಜೊತೆಗೆ ಚಿನ್ನ ಕದ್ದು ಪರಾರಿಯಾಗಿದ್ದಾರೆ.
ಸುಮಾರು 12 ಕೋಟಿ ಹಣದೊಂದಿಗೆ ಚಿನ್ನ ಕದ್ದು ಎಸ್ಕೇಪ್ ಆದ ಗ್ಯಾಂಗ್ ಕನ್ನಡದಲ್ಲೇ ಮಾತಾಡುತ್ತಿದ್ದರು ಎಂದು ತಿಳಿದು ಬಂದಿದೆ. ಫಿಯೆಟ್ ಕಾರಿನಲ್ಲಿ ಬಂದು ಪಿಸ್ತೂಲು, ತಲವಾರು ತೋರಿಸಿ ಲೂಟಿ ಮಾಡಲಾಗಿದೆ.
ಸಹಕಾರಿ ಬ್ಯಾಂಕ್ ನಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ.ಸಿ.ಸಿ ಕ್ಯಾಮರಾವನ್ನು ರಿಪೇರಿಗೆ ನೀಡಲಾಗಿತ್ತು. ಐದಾರು ಮಂದಿ ಮಾತ್ರ ಬ್ಯಾಂಕ್ ಸಿಬ್ಬಂದಿ ಇದ್ದರು. ಆರೋಪಿಗಳು ಕನ್ನಡ ಮತ್ತು ಹಿಂದಿಯಲ್ಲಿ ಮಾತಾಡಿರುವುದು ದಾಖಲಾಗಿದೆ.
ಶುಕ್ರವಾರ ಮಧ್ಯಾಹ್ನ ಆದ ಕಾರಣ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಮಸೀದಿಗಾಗಿ ತೆರಳುತ್ತಿದ್ದರು. ಮಂಗಳೂರಲ್ಲಿ ಸಿಎಂ ಪ್ರೋಗ್ರಾಮ್ ಇದ್ದ ಕಾರಣ ಹೆಚ್ಚಿನ ಪೊಲೀಸ್ ಭದ್ರತೆ ಕೂಡ ಇತ್ತು. ಇದೇ ಒಳ್ಳೆಯ ಅವಕಾಶ ಎಂದು ಭಾವಿಸಿ ಪಕ್ಕಾ ಪ್ಲಾನ್ ಮಾಡಿ ದರೋಡೆ ಮಾಡಲಾಗಿದೆ
ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿಗಳು ಶೀಘ್ರ ಆರೋಪಿಗಳ ಪತ್ತೆಗೆ ಖಡಕ್ ಸೂಚನೆ ನೀಡಿದರು.